ನವದೆಹಲಿ: ಭಾರತೀಯ ರೈಲ್ವೆಯು ದಕ್ಷಿಣ ಮಧ್ಯ ರೈಲ್ವೇ (SCR) ಯಲ್ಲಿ ಮೊದಲ ಬಾರಿಗೆ ಎರಡು ಭಾರೀ ಉದ್ದದ ಸಂಚರಿಸುವ ಸರಕು ರೈಲುಗಳಾದ ತ್ರಿಶೂಲ್ ಮತ್ತು ಗರುಡ ರೈಲುಗಳನ್ನು ಯಶಸ್ವಿಯಾಗಿ ನಿರ್ವಹಿಸಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಈ ಸರಕು ರೈಲುಗಳು ಸಾಮಾನ್ಯ ಜೋಡಣೆಗಿಂತ ಎರಡು ಅಥವಾ ಹಲವು ಪಟ್ಟು ಹೆಚ್ಚು ಉದ್ದವಿರುವ ರೈಲುಗಳಾಗಿದ್ದು, ಇದು ನಿರ್ಣಾಯಕ ವಿಭಾಗಗಳಲ್ಲಿ ಸಾಮರ್ಥ್ಯದ ನಿರ್ಬಂಧಗಳ ಸಮಸ್ಯೆಗೆ ಉತ್ತಮ ಪರಿಣಾಮಕಾರಿ ಪರಿಹಾರವನ್ನು ನೀಡುತ್ತವೆ ಎಂದು ಹೇಳಲಾಗಿದೆ.
ತ್ರಿಶೂಲ್ ದಕ್ಷಿಣ ಮಧ್ಯ ರೈಲ್ವೆಯ ಮೊದಲ ಸುದೀರ್ಘ ಉದ್ದದ ರೈಲಾಗಿದ್ದು, ಇದು ಮೂರು ಸರಕು ರೈಲುಗಳ ಜೋಡಣೆಯಾಗಿದೆ. ಅಂದರೆ, 177 ವ್ಯಾಗನ್ಗಳು. ಈ ರೈಲನ್ನು ಅಕ್ಟೋಬರ್ 7 ರಂದು ವಿಜಯವಾಡ ವಿಭಾಗದ ಕೊಂಡಪಲ್ಲಿ ನಿಲ್ದಾಣದಿಂದ ಪೂರ್ವ ಕರಾವಳಿ ರೈಲ್ವೆಯ ಕುರ್ದಾ ವಿಭಾಗಕ್ಕೆ ಆರಂಭಿಸಲಾಯಿತು ಎಂದು ರೈಲ್ವೇ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ದಕ್ಷಿಣ ಮಧ್ಯ ರೈಲ್ವೆ (ಎಸ್ಸಿಆರ್) ಇದನ್ನು ಅನುಸರಿಸಿ ಇದೇ ರೀತಿಯ ಮತ್ತೊಂದು ಸುದೀರ್ಘ ಉದ್ದದ ರೈಲು ಗರುಡವನ್ನು ಅಕ್ಟೋಬರ್ 8 ರಂದು ಗುಂತಕಲ್ ವಿಭಾಗದ ರಾಯಚೂರಿನಿಂದ ಸಿಕಂದರಾಬಾದ್ ವಿಭಾಗದ ಮಣಗೂರುವವರೆಗೆ ಓಡಿಸಿದೆ.
ಈ ಎರಡೂ ರೈಲುಗಳು ಕಲ್ಲಿದ್ದಲನ್ನು ಲೋಡ್ ಮಾಡಲು ಖಾಲಿ ತೆರೆದ ವ್ಯಾಗನ್ಗಳನ್ನು ಉಷ್ಣ ವಿದ್ಯುತ್ ಕೇಂದ್ರಗಳಿಗೆ ಸಾಗಿಸಿದೆ ಎಂದು ಸಚಿವಾಲಯ ಹೇಳಿದೆ.
ದಕ್ಷಿಣ ಮಧ್ಯ ರೈಲ್ವೆ ಭಾರತೀಯ ರೈಲ್ವೇಯ ಐದು ಪ್ರಮುಖ ಸರಕು ಲೋಡಿಂಗ್ ರೈಲ್ವೇಗಳಲ್ಲಿ ಒಂದಾಗಿದೆ. ವಿಶಾಖಪಟ್ಟಣಂ-ವಿಜಯವಾಡ-ಗುಡೂರು-ರೇಣಿಗುಂಟಾ, ಬಲ್ಲರ್ಷಾ-ಕಾಜಿಪೇಟೆ-ವಿಜಯವಾಡ, ಕಾಜಿಪೇಟೆ-ಸಿಕಂದರಾಬಾದ್-ವಾಡಿ, ವಿಜಯವಾಡ-ಗುಂಟೂರು-ಗುಂತಕಲ್ ವಿಭಾಗಗಳಲ್ಲಿನ ಮಾರ್ಗಗಳಲ್ಲಿ ಇದು ಹೆಚ್ಚಿನ ಸರಕು ಸಾಗಾಣಿಕೆಗಳನ್ನು ನಡೆಸುತ್ತದೆ.
#Railways successfully operates two long haul freight trains Trishul and Garuda for the first time over South Central Railway.@RailMinIndia pic.twitter.com/R7A8o5VuUx
— DD News (@DDNewslive) October 10, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.