ನವದೆಹಲಿ: ಹಬ್ಬದ ಸಮಯದಲ್ಲಿ ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ರೈಲ್ವೇ ಇಂದಿನಿಂದ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ.
ಅಕ್ಟೋಬರ್ 10 ರಿಂದ ನವೆಂಬರ್ 21 ರ ನಡುವೆ ಸುಮಾರು 1500 ವಿಶೇಷ ರೈಲುಗಳನ್ನು ಓಡಿಸಲು ರೈಲ್ವೇ ಯೋಜಿಸಿದೆ. ಸಾಮಾನ್ಯವಾಗಿ, ಹಬ್ಬದ ಸಮಯದಲ್ಲಿ ರೈಲ್ವೆಗಳು ಸುಮಾರು 5000 ವಿಶೇಷ ರೈಲುಗಳನ್ನು ಓಡಿಸುತ್ತವೆ. ಆದರೆ, ಕೊರೋನಾ ಸಾಂಕ್ರಾಮಿಕವು ರೈಲುಗಳ ಕಾರ್ಯಾಚರಣೆ ಮತ್ತು ರೈಲುಗಳ ಬೇಡಿಕೆಯನ್ನು ಕುಗ್ಗಿಸಿದೆ. ಪ್ರತಿ ವರ್ಷ, ಪೂರ್ವ ಭಾರತದ ಭಾಗದಲ್ಲಿ ದಸರಾದ ಛತ್ ಪೂಜಾ ಸಮಯದಲ್ಲಿ ಪ್ರಯಾಣಿಕ ರೈಲುಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ.
ಹಬ್ಬದ ಸಮಯದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಕಡಿಮೆ ಮಾಡಲು ಉತ್ತರ ರೈಲ್ವೇ ಇಂದಿನಿಂದ ಹಲವಾರು ವಿಶೇಷ ರೈಲುಗಳನ್ನು ಆರಂಭಿಸುವುದಾಗಿ ಘೋಷಿಸಿದೆ.
ವಿಶೇಷ ರೈಲು ಸೇವೆಗಳನ್ನು ನಡೆಸಲು ದಕ್ಷಿಣ ರೈಲ್ವೇ ನಿರ್ಧರಿಸಿದೆ. ಇದಕ್ಕೆ ಅಡ್ವಾನ್ಸ್ ರಿಸರ್ವೇಶನ್ ಈಗಾಗಲೇ ಆರಂಭವಾಗಿರುವಿದೆ. ಪಶ್ಚಿಮ ರೈಲ್ವೇ, ದಕ್ಷಿಣ ಮಧ್ಯ ರೈಲ್ವೆ ಮತ್ತು ಆಗ್ನೇಯ ರೈಲ್ವೆಗಳು ಹಲವಾರು ವಿಶೇಷ ರೈಲುಗಳನ್ನು ಓಡಿಸುವುದಾಗಿ ಘೋಷಿಸಿವೆ. ಇವುಗಳಲ್ಲಿ ಹೌರಾ-ಪುರಿ ವಿಶೇಷ, ಮತ್ತು ಹಟಿಯಾ-ದುರ್ಗ ವಿಶೇಷ ರೈಲುಗಳು ಸೇರಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.