ಮುಂಬಯಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇಂದು ತನ್ನ ದ್ವೆಮಾಸಿಕ ವಿತ್ತೀಯ ನೀತಿಯನ್ನು ಪ್ರಕಟ ಮಾಡಿದೆ. ಸತತ ಎಂಟನೇ ಬಾರಿಗೆ ರೆಪೊ ದರವನ್ನು ಬದಲಾಯಿಸದೆ ಶೇಕಡಾ 4ರ ಯಥಾಸ್ಥಿತಿ ಮುಂದುವರಿಸಿದೆ.
ಕಳೆದ ವರ್ಷ 2020ರಿಂದ ಅಂದರೆ ದೇಶದಲ್ಲಿ ಕೋವಿಡ್ ಅಪ್ಪಳಿಸಿದ ಬಳಿಕ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದ ಹಣಕಾಸು ವಿತ್ತೀಯ ಸಮಿತಿ ರೆಪೊ ಮತ್ತು ರಿವರ್ಸ್ ರೆಪೊ ದರವನ್ನು ಬದಲಾಯಿಸಿಲ್ಲ. 2020ರ ಮೇ 22ರಂದು ಕೊನೆಯ ಬಾರಿಗೆ ಬಡ್ಡಿ ದರವನ್ನು ಬದಲಾಯಿಸಲಾಗಿತ್ತು.
ಕಳೆದ ದ್ವೈಮಾಸಿಕ ಹಣಕಾಸು ನೀತಿಯಂತೆ ಈ ಬಾರಿ ಕೂಡ ರೆಪೊ ದರವನ್ನು ಶೇಕಡಾ 4ರಷ್ಟು ಮತ್ತು ರಿವರ್ಸ್ ರೆಪೊ ದರವನ್ನು ಶೇಕಡಾ 3.35ರಷ್ಟು ಯಥಾಸ್ಥಿತಿಯನ್ನು ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಇಂದು ಹಣಕಾಸು ವಿತ್ತೀಯ ನೀತಿಯ ಸಭೆಯ ನಂತರ ಶಕ್ತಿಕಾಂತ್ ದಾಸ್ ಮಾಹಿತಿ ನೀಡಿದ್ದಾರೆ
ಆರ್ಥಿಕತೆ ಪುನಶ್ಚೇತನ ಮತ್ತು ಹಣದುಬ್ಬರವನ್ನು ನಿಯಂತ್ರಣದಲ್ಲಿಡಲು ರೆಪೋ ದರ ಮತ್ತು ರಿಸರ್ವ್ ರೆಪೋ ದರದಲ್ಲಿ ಯಾವುದೇ ಬದಲಾವಣೆಗಳನ್ನು ಆರ್ಬಿಐ ತರುತ್ತಿಲ್ಲ.
ರೆಪೊ ದರ ಎಂದರೆ ಬ್ಯಾಂಕುಗಳಿಗೆ ಆರ್ಬಿಐ ಕೊಡುವ ಸಾಲದ ಹಣದ ಮೇಲೆ ವಿಧಿಸುವ ನಿಶ್ಚಿತ ಬಡ್ಡಿ ದರ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.