ಓಸ್ಲೋ: ಫಿಲಿಪೈನ್ಸ್ ಪತ್ರಕರ್ತೆ ಮರಿಯಾ ರೆಸ್ಸಾ ಮತ್ತು ರಷ್ಯಾದ ಡಿಮಿಟ್ರಿ ಮುರಾಟೋವ್ ಅವರಿಗೆ ಈ ಬಾರಿಯ ನೋಬೆಲ್ ಶಾಂತಿ ಪುರಸ್ಕಾರವನ್ನು ಘೋಷಿಸಲಾಗಿದೆ. ತಮ್ಮ ತಮ್ಮ ದೇಶಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟಕ್ಕಾಗಿ ಇವರಿಗೆ ಪುರಸ್ಕಾರ ಒಲಿದು ಬಂದಿದೆ.
ನಾರ್ವೇಜಿಯನ್ ನೊಬೆಲ್ ಸಮಿತಿಯ ಅಧ್ಯಕ್ಷೆ ಬೆರಿಟ್ ರೀಸ್-ಆಂಡರ್ಸನ್ ಇವರ ಹೆಸರನ್ನು ಘೋಷಣೆ ಮಾಡಿ, “ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾಪಾಡುವ ಪ್ರಯತ್ನಗಳಿಗಾಗಿ ಈ ಇಬ್ಬರನ್ನು ಪುರಸ್ಕಾರ ನೀಡಿ ಗೌರವಿಸಲಾಗಿದೆ” ಎಂದು ಹೇಳಿದ್ದಾರೆ.
“ಹೆಚ್ಚು ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸುತ್ತಿರುವ ಜಗತ್ತಿನಲ್ಲಿ ಇವರು ಪ್ರಜಾಪ್ರಭುತ್ವ ಮತ್ತು ಪತ್ರಿಕಾ ಸ್ವಾತಂತ್ರ್ಯದ ಆದರ್ಶಕ್ಕಾಗಿ ನಿಲ್ಲುವ ಎಲ್ಲ ಪತ್ರಕರ್ತರ ಪ್ರತಿನಿಧಿಗಳಾಗಿದ್ದಾರೆ” ಎಂದು ಹೇಳಿದ್ದಾರೆ.
2012 ರಲ್ಲಿ ರೆಸ್ಸಾರಾಪ್ಲರ್ ಅನ್ನು ಸಹ-ಸ್ಥಾಪಿಸಿದರು, ಇದು ತನಿಖಾ ಪತ್ರಿಕೋದ್ಯಮಕ್ಕಾಗಿನ ಡಿಜಿಟಲ್ ಮೀಡಿಯಾ ಕಂಪನಿಯಾಗಿದೆ. ಈಗಲೂ ಅವರು ಈ ಕಂಪನಿಯ ಮುಖ್ಯಸ್ಥರಾಗಿದ್ದಾರೆ.
ಮುರಾಟೋವ್ ರಷ್ಯಾದಲ್ಲಿ ಹೆಚ್ಚು ಸವಾಲಿನ ಪರಿಸ್ಥಿತಿಗಳಲ್ಲೂ ವಾಕ್ ಸ್ವಾತಂತ್ರ್ಯವನ್ನು ದಶಕಗಳಿಂದ ಸಮರ್ಥಿಸಿಕೊಂಡು ಬರುತ್ತಿದ್ದಾರೆ.
1993 ರಲ್ಲಿ, ಅವರು ಸ್ವತಂತ್ರ ಪತ್ರಿಕೆ ನೊವಾಯಾ ಗೆಜೆಟಾದ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದರು, ಇದು ಅಧಿಕಾರದ ಬಗ್ಗೆ ಮೂಲಭೂತವಾಗಿ ವಿಮರ್ಶಾತ್ಮಕ ಮನೋಭಾವ ವನ್ನು ಹೊಂದಿದೆ. ಇವರು 1995 ರಿಂದ ಇದರ ಮುಖ್ಯ ಸಂಪಾದಕರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.