ನವದೆಹಲಿ: ಕೋವಿಶೀಲ್ಡ್ ಅಥವಾ ಯಾವುದೇ ಯುಕೆ ಅನುಮೋದಿತ ಲಸಿಕೆಯಿಂದ ಸಂಪೂರ್ಣವಾಗಿ ಲಸಿಕೆ ಪಡೆದು ಯುಕೆಗೆ ತೆರಳುವ ಭಾರತೀಯರು ಅಕ್ಟೋಬರ್ 11ರಿಂದ ಕ್ವಾರಂಟೈನ್ಗೆ ಒಳಗಾಗಬೇಕಾಗಿಲ್ಲ ಎಂದು ಭಾರತದಲ್ಲಿನ ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸ್ ಎಲ್ಲಿಸ್ ಹೇಳಿದ್ದಾರೆ.
ಎಲ್ಲಿಸ್ ಈ ಬಗ್ಗೆ ಟ್ವೀಟ್ ಮಾಡಿದ್ದು, “ಅಕ್ಟೋಬರ್ 11 ರಿಂದ ಕೋವಿಶೀಲ್ಡ್ ಅಥವಾ ಇತರ ಯುಕೆ-ಅನುಮೋದಿತ ಲಸಿಕೆ ಪಡೆದು ಯುನೈಟೆಡ್ ಕಿಂಗ್ಡಮ್ಗೆ ಪ್ರಯಾಣಿಸುವ ಭಾರತೀಯ ಪ್ರಯಾಣಿಕರಿಗೆ ಯಾವುದೇ ಕ್ಯಾರೆಂಟೈನ್ ಇಲ್ಲ” ಎಂದಿದ್ದಾರೆ.
ಕಳೆದ ತಿಂಗಳ ಆರಂಭದಲ್ಲಿ ಯುಕೆ ಟ್ರಾವೆಲ್ ಅಡ್ವೈಸರಿಯು ಭಾರತೀಯ ಪ್ರಯಾಣಿಕರಿಗೆ 10 ದಿನಗಳ ಕ್ವಾರಂಟೈನ್ ಅನ್ನು ಕಡ್ಡಾಯಗೊಳಿಸಿತ್ತು. ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ತಯಾರಿಸಿದ ಕೋವಿಶೀಲ್ಡ್ನ ಎರಡು ಡೋಸ್ಗಳನ್ನು ಪಡೆದರೂ ಕ್ವಾರಂಟೈನ್ ಕಡ್ಡಾಯ ಎಂದಿತ್ತು. ಇದಕ್ಕೆ ಪ್ರತಿಕಾರ ಎಂಬಂತೆ ಭಾರತ ಕೂಡ ಯುಕೆಯಿಂದ ಆಗಮಿಸುವ ಪ್ರಯಾಣಿಕರಿಗೆ ಭಾರತದಲ್ಲಿ ಕ್ವಾರಂಟೈನ್ ಕಡ್ಡಾಯಗೊಳಿಸಿತ್ತು.
ಆದರೆ ವಿವಿಧ ಭಾಗಗಳಲ್ಲಿ ಟೀಕೆಗಳನ್ನು ಎದುರಿಸಿದ ನಂತರ ಯುಕೆ ಟ್ರಾವೆಲ್ ಅಡ್ವೈಸರಿ ಯುಕೆ ಯಲ್ಲಿ ಅನುಮೋದಿತ ಲಸಿಕೆಯಾಗಿ ಕೋವಿಶೀಲ್ಡ್ಗೆ ಅವಕಾಶ ಕಲ್ಪಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.