ನವದೆಹಲಿ: ತಾಲಿಬಾನ್ ನಿಯಂತ್ರಣದಲ್ಲಿರುವ ಅಫಘಾನಿಸ್ಥಾನದಲ್ಲಿ ಆಹಾರಕ್ಕೆ ಹಾಹಾಕಾರ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮವು ಗೋದಿ ದಾನ ಮಾಡುವಂತೆ ಭಾರತದೊಂದಿಗೆ ಮಾತುಕತೆಯಲ್ಲಿ ತೊಡಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಶ್ವ ಆಹಾರ ಕಾರ್ಯಕ್ರಮದ ನಿರ್ದೇಶಕಿ ಮೇರಿ ಎಲ್ಲೆನ್ ಮೆಕ್ಗ್ರೋತಿ ಅವರು, ಕಳೆದ ಎರಡು ವಾರಗಳಿಂದ ಚರ್ಚೆ ನಡೆಯುತ್ತಿದೆ ಮತ್ತು ಭಾರತ ಗೋಧಿ ನೀಡುತ್ತದೆ ಎಂಬ ಭರವಸೆ ಇದೆ ಎಂದಿದ್ದಾರೆ.
ಅಪಘಾನಿಸ್ತಾನದಲ್ಲಿ ಸಾಮೂಹಿಕ ಹಸಿವಿನ ಸಮಸ್ಯೆ ಉದ್ಭವವಾಗಬಹುದು ಎಂಬ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಕಳೆದ ವರ್ಷ ಭಾರತವು ಪಾಕಿಸ್ತಾನಕ್ಕೆ 75 ಸಾವಿರ ಟನ್ ಗೋಧಿಯನ್ನು ನೀಡಿದೆ, ತನ್ನ ಆಹಾರದ ನೆರವನ್ನು ಭಾರತ ಮತ್ತೆ ಪುನರಾರಂಭಿಸುತ್ತದೆ ಎಂದು ನಂಬಿದ್ದೇನೆ ಎಂದಿದ್ದಾರೆ.
ಅಫಘಾನಿಸ್ತಾನಕ್ಕೆ ಈಗ ಭಾರತದಿಂದ ಆಹಾರದ ನೆರವಿನ ಅವಶ್ಯಕತೆ ತುಂಬಾ ಇದೆ ಎಂದಿದ್ದಾರೆ.
ಪಾಕಿಸ್ತಾನವು ನೆಲ ಮಾರ್ಗವನ್ನು ತಡೆಹಿಡಿದಿರುವುದು ಅಫಘಾನಿಸ್ತಾನಕ್ಕೆ ಆಹಾರ ಒದಗಿಸುವಲ್ಲಿ ಭಾರತಕ್ಕಿರುವ ದೊಡ್ಡ ಸವಾಲಾಗಿದೆ. ಕಳೆದ ವರ್ಷ ಭಾರತವು ತಾನು ಇರಾನಿನಲ್ಲಿ ನಿರ್ಮಿಸಿದ ಚಹಬರ್ ಪೋರ್ಟ್ ಮೂಲಕ ಅಫಘಾನಿಸ್ತಾನಕ್ಕೆ 75000 ಟನ್ ಗೋಧಿ ಪೂರೈಕೆ ಮಾಡಿತ್ತು.
ತಾಲಿಬಾನ್ ಬೆಂಬಲಿಗರಾದ ಪಾಕಿಸ್ತಾನ ಮತ್ತು ಚೀನಾ ಗೋಧಿ ರಫ್ತು ಮಾಡುವುದಿಲ್ಲ. ಕೇವಲ ಭಾರತ ಮತ್ತು ಸ್ವಲ್ಪ ಮಟ್ಟಿಗೆ ಕಜಕಿಸ್ತಾನ ಈ ಪ್ರದೇಶಕ್ಕೆ ಗೋಧಿಯನ್ನು ರಫ್ತು ಮಾಡುತ್ತವೆ.
ಅಪಘಾನಿಸ್ತಾನ ಈಗ ತಾಲಿಬಾನ್ ನಿಯಂತ್ರಣ ದಲ್ಲಿದ್ದರೂ ಅಲ್ಲಿನ ಜನರು ಮಾತ್ರ ಭಾರತದ ನೆರವಿಗಾಗಿ ಹಾತೊರೆಯುತ್ತಿದ್ದಾರೆ. ಮಾನವೀಯತೆಯ ಪ್ರತಿಪಾದಕನಾದ ಭಾರತ ವಿಶ್ವ ಆರೋಗ್ಯ ಕಾರ್ಯಕ್ರಮದ ಮನವಿಯನ್ನು ಒಪ್ಪಿಕೊಳ್ಳುವ ನಿರೀಕ್ಷೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.