ನವದೆಹಲಿ: ಮುಂಗಾರು ಮಾರುಕಟ್ಟೆ ಹಂಗಾಮಿನಡಿ (ಕೆ.ಎಂ.ಎಫ್.) 2021 – 22 ರ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ – ಎಂ.ಎಸ್.ಪಿ. ಅಡಿ ಹಿಂದಿನ ವರ್ಷದಂತೆ ಈ ಬಾರಿಯೂ ಭತ್ತ ಖರೀದಿ ಪ್ರಕ್ರಿಯೆ ಆರಂಭವಾಗಿದೆ.
ಒಟ್ಟು 2,87,552 ಮೆಟ್ರಿಕ್ ಟನ್ ಭತ್ತವನ್ನು 2021 – 22 ಕೆ.ಎಂ.ಎಸ್. ಸಂದರ್ಭದಲ್ಲಿ 5 ಅಕ್ಟೋಬರ್ 2021 ರ ವರೆಗೆ 29,907 ರೈತರಿಂದ ಖರೀದಿಸಲಾಗಿದೆ. ಇದರ ಒಟ್ಟಾರೆ ಮೌಲ್ಯ 563.60 ಕೋಟಿ ರೂಪಾಯಿ. ಇದರಲ್ಲಿ ಒಟ್ಟು 1,46,509 ಮೆಟ್ರಿಕ್ ಟನ್ ಹರ್ಯಾಣದಿಂದ ಮತ್ತು 1,41,043 ಮೆಟ್ರಿಕ್ ಟನ್ ಪಂಜಾಬ್ನಿಂದ ಖರೀದಿ ಮಾಡಲಾಗಿದೆ.
2020-21 ರ ಸಾಲಿನ ಮುಂಗಾರು ಹಂಗಾಮಿನ ಭತ್ತ ಖರೀದಿ ಬಹುತೇಕ ಪೂರ್ಣಗೊಂಡಿದ್ದು, 894.24 ಲಕ್ಷ ಮೆಟ್ರಿಕ್ ಟನ್ ಖರೀದಿ ಮಾಡಲಾಗಿದೆ. ಹಿಂಗಾರು ಹಂಗಾಮಿನಲ್ಲಿ 176.15 ಲಕ್ಷ ಮೆಟ್ರಿಕ್ ಟನ್ ಭತ್ತವನ್ನು 05.10.2021 ರ ವರೆಗೆ ಖರೀದಿಸಲಾಗಿದೆ. ಇದಕ್ಕೂ ಹಿಂದಿನ ವರ್ಷ 768.70 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿ ಮಾಡಲಾಗಿತ್ತು.
2020 – 21 ರ ಸಾಲಿನಲ್ಲಿ ಕೆ.ಎಂ.ಎಸ್ ನಡಿ 131.14 ಲಕ್ಷ ರೈತರಿಂದ 1,68,832.78 ಕೋಟಿ ರೂಪಾಯಿ ಮೌಲ್ಯದ ಭತ್ತ ಖರೀದಿ ಮಾಡಲಾಗಿದೆ. ಇದು ಭತ್ತ ಖರೀದಿಯಲ್ಲಿ ಸರ್ವಕಾಲಿಕ ದಾಖಲೆಯಾಗಿದ್ದು, 2019 – 20 ರ ಸಾಲಿಗೆ ಹೋಲಿಸಿದರೆ 770.93 ಲಕ್ಷ ಮೆಟ್ರಿಕ್ ಟನ್ ನಷ್ಟು ಹೆಚ್ಚಾಗಿದೆ. 2021 – 22 ರ ಹಿಂಗಾರು – ಆರ್.ಎಂ.ಎಸ್. ಸಾಲಿನಲ್ಲಿ 433.44 ಲಕ್ಷ ಮೆಟ್ರಿಕ್ ಟನ್ ಗೋಧಿ ಖರೀದಿಸಲಾಗಿದೆ. 49.20 ಲಕ್ಷ ರೈತರಿಗೆ ಇದರಿಂದ ಲಾಭವಾಗಿದ್ದು, ಕನಿಷ್ಠ ಬೆಂಬಲ ಬೆಲೆ – ಎಂ.ಎಸ್.ಪಿ ಮೌಲ್ಯ 85,603.57 ಕೋಟಿ ರೂಪಾಯಿ ಆಗಿದೆ.
2021 ರ ಅಕ್ಟೋಬರ್ 5 ರ ವರೆಗೆ ಒಟ್ಟು 2,87,552 ಮೆಟ್ರಿಕ್ ಟನ್ ಭತ್ತ ಸಂಗ್ರಹಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.