ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಆತ್ಮನಿರ್ಭರ ಭಾರತ ನಿರ್ಮಾಣದ ದೃಷ್ಟಿಕೋನವನ್ನು ಸಾಕಾರಗೊಳಿಸಲು ಮತ್ತು ಭಾರತವನ್ನು ಜಾಗತಿಕ ಜವಳಿ ಕ್ಷೇತ್ರದಲ್ಲಿ ಬಲಿಷ್ಠ ಸ್ಥಾನಪಡೆಯುವಂತೆ ಮಾಡಲು 2021-22ರ ಕೇಂದ್ರ ಬಜೆಟ್ ನಲ್ಲಿ ಘೋಷಿಸಿದಂತೆ ಏಳು ಪಿಎಂ ಮಿತ್ರ ಪಾರ್ಕ್ ಗಳ ಸ್ಥಾಪನೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ.
ಕೇಂದ್ರ ಸಂಪುಟದ ನಿರ್ಧಾರದ ಬಗ್ಗೆ ಮಾಹಿತಿ ನೀಡಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು, ಏಳು ಮೆಗಾ ಇಂಟಿಗ್ರೇಟೆಡ್ ಟೆಕ್ಸ್ಟೈಲ್ ರೀಜನ್ ಆಂಡ್ ಅಪರೆಲ್ (ಪಿಎಂ ಮಿತ್ರಾ) ಪಾರ್ಕ್ಗಳನ್ನು ಗ್ರೀನ್ ಫೀಲ್ಡ್ ಅಥವಾ ಬ್ರೌನ್ ಫೀಲ್ಡ್ ಸೈಟ್ ಗಳಲ್ಲಿ ಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ.
“ಎಲ್ಲಾ ಗ್ರೀನ್ಫೀಲ್ಡ್ ಪಿಎಂ ಮಿತ್ರಾಗೆ ಗರಿಷ್ಠ ಅಭಿವೃದ್ಧಿ ಬಂಡವಾಳ ಬೆಂಬಲ (ಡಿಸಿಎಸ್) ರೂ. 200 ಕೋಟಿ ಮತ್ತು ಬ್ರೌನ್ ಫೀಲ್ಡ್ ಪಿಎಂ ಮಿತ್ರಾಗೆ ಗರಿಷ್ಠ ರೂ 200 ಕೋಟಿಯನ್ನು ಸಾಮಾನ್ಯ ಮೂಲಸೌಕರ್ಯ ಅಭಿವೃದ್ಧಿಗೆ ಒದಗಿಸಲಾಗುವುದು ಮತ್ತು ಪಿಎಂ ಮಿತ್ರಾದಲ್ಲಿ ಜವಳಿ ಉತ್ಪಾದನಾ ಘಟಕಗಳ ಆರಂಭಿಕ ಸ್ಥಾಪನೆಗೆ ಪ್ರತಿ ಪಿಎಂ ಮಿತ್ರ ಪಾರ್ಕ್ಗೆ ರೂ.300 ಕೋಟಿ ಸ್ಪರ್ಧಾತ್ಮಕ ಪ್ರೋತ್ಸಾಹಕ ಬೆಂಬಲವನ್ನು (ಸಿಐಎಸ್) ಒದಗಿಸಲಾಗುವುದು. ರಾಜ್ಯ ಸರ್ಕಾರದ ಬೆಂಬಲವು ವಿಶ್ವ ದರ್ಜೆಯ ಕೈಗಾರಿಕಾ ಅಭಿವೃದ್ಧಿಗೆ 1,000 ಎಕರೆ ಭೂಮಿಯನ್ನು ಒದಗಿಸುವುದನ್ನು ಒಳಗೊಂಡಿದೆ” ಎಂದು ಗೋಯಲ್ ಹೇಳಿದ್ದಾರೆ.
ಅಧಿಕೃತ ಬಿಡುಗಡೆಯ ಪ್ರಕಾರ, ಪಿಎಂ ಮಿತ್ರಾ ಪಾರ್ಕ್ಗಳ ಮೂಲಭೂತ ಮೂಲಸೌಕರ್ಯವು ಇನ್ಕ್ಯುಬೇಶನ್ ಸೆಂಟರ್ ಮತ್ತು ಪ್ಲಗ್ ಅಂಡ್ ಪ್ಲೇ ಸೌಲಭ್ಯ, ಅಭಿವೃದ್ಧಿಪಡಿಸಿದ ಕಾರ್ಖಾನೆ ತಾಣಗಳು, ರಸ್ತೆಗಳು, ವಿದ್ಯುತ್, ನೀರು ಮತ್ತು ತ್ಯಾಜ್ಯ-ನೀರಿನ ವ್ಯವಸ್ಥೆ, ಸಾಮಾನ್ಯ ಸಂಸ್ಕರಣಾ ಮನೆ ಮತ್ತು ಸಿಇಟಿಪಿ ಮತ್ತು ವಿನ್ಯಾಸದಂತಹ ಇತರ ಸಂಬಂಧಿತ ಸೌಲಭ್ಯಗಳನ್ನು ಒಳಗೊಂಡಿರುತ್ತದೆ. ಇದು ಕಾರ್ಮಿಕರ ಹಾಸ್ಟೆಲ್ಗಳು ಮತ್ತು ವಸತಿ, ಲಾಜಿಸ್ಟಿಕ್ಸ್ ಪಾರ್ಕ್, ಗೋದಾಮು, ವೈದ್ಯಕೀಯ, ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ಸೌಲಭ್ಯಗಳಂತಹ ಬೆಂಬಲ ಮೂಲಸೌಕರ್ಯಗಳನ್ನು ಹೊಂದಿರುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.