ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೊಳಿಸಿರುವ ಪಶು ಸಂಜೀವಿನಿ ಯೋಜನೆಯನ್ನು ದೇಶದಾದ್ಯಂತ ವಿಸ್ತರಣೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಸಚಿವ ಪ್ರಭು ಚೌಹಾಣ್ ತಿಳಿಸಿದ್ದಾರೆ.
ಹಾಗೆಯೇ ರಾಷ್ಟ್ರೀಯ ರೋಗ ನಿಯಂತ್ರಣ ಯೋಜನೆಯಡಿಯಲ್ಲಿ ಸಂಚಾರಿ ಪಶು ಚಿಕಿತ್ಸಾಲಯ ಘಟಕಗಳಾದ 14 ಟಾಟಾ ವಿಂಗರ್ ರಾಜ್ಯಕ್ಕೆ ಮಂಜೂರಾಗಿದ್ದು, ನಮ್ಮ ಮಹತ್ವದ ಯೋಜನೆ ಯಶಸ್ವಿಯಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯಕ್ಕೆ 275 ಪಶು ಸಂಚಾರಿ ವಾಹನಗಳು ಮಂಜೂರಾಗಿವೆ. 44.ಕೋಟಿ ರೂ. ಬಿಡುಗಡೆಯಾಗಿದೆ. ಒಂದು ವಾಹನಕ್ಕೆ 16 ಲಕ್ಷ ರೂ. ವೆಚ್ಚವಾಗಲಿದೆ. ವಾಹನ ನಿರ್ವಹಣೆಗೆ ಪಿಪಿಇ ಮಾದರಿಯಲ್ಲಿ ವಾರ್ಷಿಕ 50 ಕೋಟಿ ರೂ. ನಿರ್ವಹಣಾ ವೆಚ್ಚವಾಗಲಿದೆ. ಪಶು ಚಿಕಿತ್ಸಾಲಯಕ್ಕೆ ಒಬ್ಬ ವೈದ್ಯರು, ಒಬ್ಬ ಸಹಾಯಕ, ಒಬ್ಬ ಡ್ರೈವರ್ ಇರುತ್ತಾರೆ. 1962 ಗೆ ಕರೆ ಮಾಡಿ ಪಶು ಸಂಜೀವಿನಿಯ ಉಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.