ನವದೆಹಲಿ: ಟಿವಿಎಸ್ ಮೋಟಾರ್ ಕಂಪನಿ ಭಾರತದಾದ್ಯಂತ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಇನ್ಫ್ರಾಸ್ಟ್ರಕ್ಚರ್ (ಇವಿಸಿಐ)ನ ಸಮಗ್ರ ಅನುಷ್ಠಾನಕ್ಕೆ ಚಾಲನೆ ನೀಡಲು ಮತ್ತು ಟಿವಿಎಸ್ ಮೋಟಾರ್ ಸ್ಥಳಗಳಲ್ಲಿ ಸೌರ ವಿದ್ಯುತ್ ತಂತ್ರಜ್ಞಾನಗಳನ್ನು ನಿಯೋಜಿಸಲು ಟಾಟಾ ಪವರ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ.
ಪಾಲುದಾರಿಕೆಯು ಭಾರತದಲ್ಲಿ ಎಲೆಕ್ಟ್ರಿಕ್ ಸಾರಿಗೆಯನ್ನು ವೇಗಗೊಳಿಸಲು ವಿದ್ಯುತ್ ದ್ವಿಚಕ್ರ ವಾಹನ ಚಾರ್ಜಿಂಗ್ ಮೂಲಸೌಕರ್ಯವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ ಎಂದು ಟಾಟಾ ಪವರ್ ಹೇಳಿಕೆಯಲ್ಲಿ ತಿಳಿಸಿದೆ.
ಇದು ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಗ್ರಾಹಕರಿಗೆ ಟಿವಿಎಸ್ ಮೋಟಾರ್ ಕಸ್ಟಮರ್ ಕನೆಕ್ಟ್ ಅಪ್ಲಿಕೇಶನ್ ಮತ್ತು ಟಾಟಾ ಪವರ್ ಇಝಡ್ ಚಾರ್ಜ್ ಆಪ್ ಮೂಲಕ ವ್ಯಾಪಕವಾದ ಚಾರ್ಜಿಂಗ್ ನೆಟ್ವರ್ಕ್ಗೆ ಪ್ರವೇಶವನ್ನು ನೀಡುತ್ತದೆ ಎಂದು ಕಂಪನಿ ಹೇಳಿದೆ.
ಈ ಪಾಲುದಾರಿಕೆಯು ನಿಯಮಿತ ಎಸಿ ಚಾರ್ಜಿಂಗ್ ನೆಟ್ವರ್ಕ್ ಮತ್ತು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಡಿಸಿ ಫಾಸ್ಟ್ ಚಾರ್ಜಿಂಗ್ ನೆಟ್ವರ್ಕ್ ಅನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ ಮತ್ತು ಇದು ಎಲೆಕ್ಟ್ರಿಕ್ ಸಾರಿಗೆಯತ್ತ ಹೆಜ್ಜೆ ಹಾಕಲು ಇಚ್ಛಿಸುವ ದ್ವಿಚಕ್ರ ವಾಹನ ಗ್ರಾಹಕರಿಗೆ ಸಹಾಯ ಮಾಡುತ್ತದೆ.
ಟಾಟಾ ಪವರ್ ಭಾರತದ 120 ಕ್ಕೂ ಹೆಚ್ಚು ನಗರಗಳಲ್ಲಿ 5,000 ಕ್ಕೂ ಹೆಚ್ಚು ಹೋಮ್ ಚಾರ್ಜರ್ಗಳು ಮತ್ತು 700 ಕ್ಕೂ ಹೆಚ್ಚು ಸಾರ್ವಜನಿಕ ಚಾರ್ಜರ್ಗಳ ವಿಸ್ತಾರವಾದ ಜಾಲವನ್ನು ಹೊಂದಿದೆ. ಕಂಪನಿಯು ಇವಿ ಇಕೋ-ಸಿಸ್ಟಂನ ಎಲ್ಲಾ ವಿಭಾಗಗಳಲ್ಲೂ ಇದೆ. ಸಾರ್ವಜನಿಕ ಚಾರ್ಜಿಂಗ್, ಕ್ಯಾಪ್ಟಿವ್ ಚಾರ್ಜಿಂಗ್, ಮನೆ ಮತ್ತು ಕೆಲಸದ ಚಾರ್ಜಿಂಗ್ ಕೇಂದ್ರಗಳು, ಮತ್ತು ಡಿಸಿ ಚಾರ್ಜರ್ಗಳು ಮತ್ತು ಎಸಿ ಚಾರ್ಜರ್ ಸೇರಿದಂತೆ ಎಲ್ಲಾ ರೀತಿಯ ಚಾರ್ಜರ್ಗಳನ್ನು ನಿಯೋಜಿಸಲಾಗಿದೆ ಎಂದು ಕಂಪನಿ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.