ನವದೆಹಲಿ: 2030 ರ ವೇಳೆಗೆ ಶೂನ್ಯ ಇಂಗಾಲ ಹೊರಸೂಸುವಿಕೆ ಗುರಿಯನ್ನು ಸಾಧಿಸಲು ಭಾರತೀಯ ರೈಲ್ವೆಯು 30 GW ನವೀಕರಿಸಬಹುದಾದ ಇಂಧನ ಉತ್ಪಾದನಾ ಸಾಮರ್ಥ್ಯವನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ರೈಲ್ವೇ ಹಲವು ಹಂತಗಳಲ್ಲಿ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಪ್ರಸ್ತುತ, ದಕ್ಷಿಣ ರೈಲ್ವೆಯ ಟ್ರ್ಯಾಕ್ಷನ್ ಮತ್ತು ನಾನ್ ಟ್ರ್ಯಾಕ್ಷನ್ ಸೇರಿದಂತೆ ಒಟ್ಟು ಶಕ್ತಿಯ ಅವಶ್ಯಕತೆಗಳಲ್ಲಿ 2.1% ನವೀಕರಿಸಬಹುದಾದ ಇಂಧನ ಮೂಲದಿಂದ ಬರುತ್ತದೆ.
ದಕ್ಷಿಣ ರೈಲ್ವೆ 2020-21ರ ಅವಧಿಯಲ್ಲಿ ಟ್ರ್ಯಾಕ್ಷನ್ ವಿಭಾಗದಲ್ಲಿ 570 ಮಿಲಿಯನ್ ಯೂನಿಟ್ಗಳು ಮತ್ತು ಟ್ರ್ಯಾಕ್ಷನ್ ಅಲ್ಲದ ವಿಭಾಗದಲ್ಲಿ 18 ಮಿಲಿಯನ್ ಯೂನಿಟ್ಗಳ ಇಂಧನ ಉಳಿತಾಯ ಮಾಡಿದೆ.
ಈ ಇಂಧನ ಉಳಿತಾಯವು CO2 ಹೊರಸೂಸುವಿಕೆಯನ್ನು 5,88,000 ಮೆಟ್ರಿಕ್ ಟನ್ಗಳಷ್ಟು ಕಡಿತ ಮಾಡಿದೆ ಮತ್ತು ರೂ 377 ಕೋಟಿಗಳನ್ನು ಉಳಿಸಿದೆ.
100% ಮಾರ್ಗಗಳ ವಿದ್ಯುದ್ದೀಕರಣದ ಗುರಿ ಹೊಂದಿರುವ ದಕ್ಷಿಣ ರೈಲ್ವೆ 2020-21ರ ಅವಧಿಯಲ್ಲಿ 370 ಟ್ರ್ಯಾಕ್ ಕಿಲೋಮೀಟರ್ಗಳನ್ನು ವಿದ್ಯುದ್ದೀಕರಣಗೊಳಿಸಿದೆ.
ಅಲ್ಲದೆ, ಎಲೆಕ್ಟ್ರಿಕ್ ಲೋಕೋಮೋಟಿವ್ಗಳ ಒಟ್ಟು ಹೋಲ್ಡಿಂಗ್ 568 ಕ್ಕೆ ಏರಿಕೆಯಾಗಿದೆ ಮತ್ತು ಡೀಸೆಲ್ ಇಂಜಿನ್ಗಳು 120 ಕ್ಕೆ ಇಳಿದಿವೆ, ಇದರ ಪರಿಣಾಮವಾಗಿ ರೈಲುಗಳ ಸಂಚಾರ ದಕ್ಷತೆ ಹೆಚ್ಚಾಗಿದೆ ಜೊತೆಗೆ ಅಪಾರ ಪ್ರಮಾಣದ ಡೀಸೆಲ್ ಉಳಿತಾಯವಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.