ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ತನ್ನ ಮೊದಲ ಆರ್ಟ್ ಗ್ಯಾಲರಿಯನ್ನು ಪಡೆದುಕೊಂಡಿದೆ. ಅಲ್ಲಿನ ಆಡಳಿತವು ಶುಕ್ರವಾರ ಕಣಿವೆಯ ಮೊದಲ ಆರ್ಟ್ ಗ್ಯಾಲರಿಯನ್ನು ಶ್ರೀನಗರದಲ್ಲಿ ಉದ್ಘಾಟನೆ ಮಾಡಿದೆ.
ಈ ಬಗ್ಗೆ ಮಾತನಾಡಿದ ಆರ್ಟ್ ಗ್ಯಾಲರಿಯ ಉಸ್ತುವಾರಿ ಜೀಲಾನಿ ಮಲಿಕ್, “ನಾವು ಗ್ಯಾಲರಿಯಲ್ಲಿ ಮೂರು ವಿಭಾಗಗಳನ್ನು ಹೊಂದಿದ್ದೇವೆ, ಇದರಲ್ಲಿ ಆಧುನಿಕ ಕಲೆ, ಪುರಾತತ್ವ ವಿಭಾಗ ಮತ್ತು ಪ್ರಾಚೀನ ಕಲೆಗಳ ಸಂಗ್ರಹವಿದೆ. ವಿದ್ಯಾರ್ಥಿಗಳು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಈ ಬಗ್ಗೆ ನಿಜವಾಗಿಯೂ ಸಂತೋಷವಿದೆ ” ಎಂದಿದ್ದಾರೆ.
ಕಾಶ್ಮೀರದ ಪ್ರಸಿದ್ಧ ಕಲಾವಿದ ನೌಶಾದ್ ಗಯೂರ್ ಮಾತನಾಡಿ, “ಇದು ಕಲಾವಿದರು ಮತ್ತು ವಿದ್ಯಾರ್ಥಿಗಳ ಬಹುಕಾಲದ ಬೇಡಿಕೆಯಾಗಿತ್ತು. ನಮ್ಮಲ್ಲಿ ಸಾಂಸ್ಕೃತಿಕ ಶಿಕ್ಷಣ ತಜ್ಞತೆ ಮತ್ತು ಪುರಾತತ್ತ್ವ ಶಾಸ್ತ್ರದ ಸಂಗ್ರಹವಿದೆ. ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ (NGMA) ನಂತರ, ಅತ್ಯುತ್ತಮ ಪುರಾತತ್ತ್ವ ಶಾಸ್ತ್ರ ಮತ್ತು ಆಧುನಿಕ ಸಂಗ್ರಹವನ್ನು ನಮ್ಮ ಗ್ಯಾಲರಿ ಹೊಂದಿದೆ. ನಾವು ದೇಶದಾದ್ಯಂತ ಕಲಾವಿದರಿಂದ ಕಲಾಕೃತಿಗಳನ್ನು ಸಂಗ್ರಹಿಸುತ್ತಿದ್ದೇವೆ. ಇಲ್ಲಿ ವಿದ್ಯಾರ್ಥಿಗಳು ಕಲಾಕೃತಿಗಳನ್ನು ವೀಕ್ಷಿಸಬಹುದು ಮತ್ತು ಅವುಗಳ ನಿಖರ ಕೆಲಸಗಳನ್ನು ಅಧ್ಯಯನ ಮಾಡಬಹುದಾಗಿದೆ” ಎಂದಿದ್ದಾರೆ.
ಕಲಾ ಶಿಕ್ಷಕರಾದ ಶೋಕೆಟ್ ಅಹ್ಮದ್ ಮಾತನಾಡಿ, “ಇದು ಸುಮಾರು 70 ವರ್ಷಗಳ ಬಹುಕಾಲದ ಬೇಡಿಕೆಯಾಗಿತ್ತು. ಈ ಕಲಾ ಗ್ಯಾಲರಿ ಕಾಶ್ಮೀರವನ್ನು ಉತ್ತೇಜಿಸುತ್ತದೆ, ಏಕೆಂದರೆ ಸಮಾಜದಲ್ಲಿ ಕಲೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಲಭ್ಯವಿರುವ ದತ್ತಾಂಶದ ಪ್ರಕಾರ ವಿಶ್ವವಿದ್ಯಾಲಯದ ವಿಭಾಗಗಳು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಆಡಳಿತದ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ” ಎಂದಿದ್ದಾರೆ.
ಕಲಾ ವಿದ್ಯಾರ್ಥಿಯಾದ ಸನೋಬರ್ ಅಶ್ರಫ್ ಮಾತನಾಡಿ, “ನಮ್ಮ ಕಲಾಕೃತಿಗಳನ್ನು ಪ್ರದರ್ಶಿಸಲು ನಮಗೆ ಯಾವುದೇ ಸ್ಥಳವಿರಲಿಲ್ಲ. ಆದರೆ ಈ ಕೊರತೆ ಈಗ ನೀಗಿದೆ. ನಾನು ಪ್ರಸಿದ್ಧ ಕಲಾವಿದರು ಮತ್ತು ನಮ್ಮ ಹಿರಿಯರ ಕಲಾಕೃತಿಗಳನ್ನು ಇಲ್ಲಿ ನೋಡಿದೆ. ನನಗೆ ಗ್ಯಾಲರಿಯ ಬಗ್ಗೆ ಸಕಾರಾತ್ಮಕ ಭಾವನೆ ಇದೆ” ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.