ನವದೆಹಲಿ: ತಂತ್ರಜ್ಞಾನ ಚಾಲಿತ ಯುಗದಲ್ಲಿ ಅಗತ್ಯವಿರುವ ಡಿಜಿಟಲ್ ಕೌಶಲ್ಯಗಳನ್ನು ನೀಡುವ ಮೂಲಕ ಯುವಕರ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಡಿಜಿಟಲ್ ಕೌಶಲ್ಯ ಕಾರ್ಯಕ್ರಮ ಡಿಜಿ ಸಕ್ಷಮ್ ಗೆ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಭೂಪೇಂದರ್ ಯಾದವ್ ಚಾಲನೆ ನೀಡಿದರು.
ಮೈಕ್ರೋಸಾಫ್ಟ್ ಇಂಡಿಯಾದೊಂದಿಗಿನ ಈ ಜಂಟಿ ಉಪಕ್ರಮವು ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳ ಯುವಕರನ್ನು ಬೆಂಬಲಿಸಲು ಸರ್ಕಾರದ ನಡೆಯುತ್ತಿರುವ ಕಾರ್ಯಕ್ರಮಗಳ ವಿಸ್ತರಣೆಯಾಗಿದೆ.
ಡಿಜಿ ಸಕ್ಷಮ್ ಉಪಕ್ರಮದ ಮೂಲಕ, ಮೊದಲ ವರ್ಷದಲ್ಲಿ 3 ಲಕ್ಷಕ್ಕೂ ಹೆಚ್ಚು ಯುವಕರಿಗೆ ಮೂಲ ಕೌಶಲ್ಯಗಳು ಮತ್ತು ಉನ್ನತ ಕಂಪ್ಯೂಟಿಂಗ್ ಸೇರಿದಂತೆ ಡಿಜಿಟಲ್ ಕೌಶಲ್ಯಗಳಲ್ಲಿ ಉಚಿತ ತರಬೇತಿಯನ್ನು ನೀಡಲಾಗುವುದು. ಉದ್ಯೋಗಾಕಾಂಕ್ಷಿಗಳು ರಾಷ್ಟ್ರೀಯ ವೃತ್ತಿ ಸೇವೆ (ಎನ್ ಸಿ ಎಸ್) ಪೋರ್ಟಲ್ (www.ncs.gov.in) ಮೂಲಕ ತರಬೇತಿಯನ್ನು ಪ್ರವೇಶಿಸಬಹುದು. ಈ ಉಪಕ್ರಮವು ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಕೆಲಸ ಕಳೆದುಕೊಂಡವರು ಸೇರಿದಂತೆ ವಂಚಿತ ಸಮುದಾಯಗಳಿಗೆ ಸೇರಿದ ಅರೆ ನಗರ ಪ್ರದೇಶಗಳ ಉದ್ಯೋಗಾಕಾಂಕ್ಷಿಗಳಿಗೆ ಆದ್ಯತೆ ನೀಡುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.