ನವದೆಹಲಿ: ಕೋವಿಡ್ -19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಮೋಟಾರ್ ವಾಹನಗಳ (ಎಂವಿ) ಕಾಯ್ದೆ, 1988 ಮತ್ತು ಕೇಂದ್ರ ಮೋಟಾರು ವಾಹನ (ಸಿಎಮ್ವಿ) ನಿಯಮಗಳಿಗೆ ಸಂಬಂಧಿಸಿದ ದಾಖಲೆಗಳ ಸಿಂಧುತ್ವವನ್ನು ಅಕ್ಟೋಬರ್ 31 ರವರೆಗೆ ವಿಸ್ತರಿಸಿದೆ.
ಕಳೆದ ವರ್ಷ ಮಾರ್ಚ್ 30, ಜೂನ್ 9 ಜೂನ್ , ಆಗಸ್ಟ್ 24, 27 ಡಿಸೆಂಬರ್ 2020, ಮತ್ತು 26 ಮಾರ್ಚ್ 2021 ಮತ್ತು 17 ಜೂನ್ 2021 ರಂದು ಸಚಿವಾಲಯವು ಇದೇ ರೀತಿಯಾದ ನಿರ್ಧಾರ ತೆಗೆದುಕೊಂಡಿತ್ತು.
ಕೋವಿಡ್ -19 ಹರಡುವುದನ್ನು ತಡೆಗಟ್ಟುವ ಅಗತ್ಯವನ್ನು ಪರಿಗಣಿಸಿ, ಫಿಟ್ನೆಸ್, ಅನುಮತಿ (ಎಲ್ಲಾ ವಿಧಗಳು), ಪರವಾನಗಿ, ನೋಂದಣಿ ಅಥವಾ ಯಾವುದೇ ಇತರ ಸಂಬಂಧಿತ ದಾಖಲೆಗಳ ಮಾನ್ಯತೆಯನ್ನು ಅಕ್ಟೋಬರ್ 31 ರವರೆಗೆ ಮಾನ್ಯವೆಂದು ಪರಿಗಣಿಸಬಹುದು ಎಂದು ಸೂಚಿಸಲಾಗಿದೆ.
“ಇದು ಫೆಬ್ರವರಿ 1, 2020 ರಲ್ಲಿ ಅವಧಿ ಮುಗಿದ ಅಥವಾ ಅಕ್ಟೋಬರ್ 31, 2021 ಕ್ಕೆ ಮುಕ್ತಾಯಗೊಳ್ಳುವ ಎಲ್ಲ ದಾಖಲೆಗಳನ್ನು ಒಳಗೊಂಡಿದೆ. ಅಕ್ಟೋಬರ್ 31, 2021 ರವರೆಗೆ ಮಾನ್ಯವಾಗಿರುವಂತೆ ದಾಖಲೆಗಳನ್ನು ಜಾರಿಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ” ಎಂದು ರಸ್ತೆ ಸಾರಿಗೆ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಈ ಮೊದಲು, ಸಚಿವಾಲಯವು ಎಲ್ಲಾ MVA ಮತ್ತು CMV ಸಂಬಂಧಿತ ದಾಖಲೆಗಳ ಮಾನ್ಯತೆಯನ್ನು 30 ಸೆಪ್ಟೆಂಬರ್ 2021 ರವರೆಗೆ ವಿಸ್ತರಿಸಿತ್ತು.
ಸರ್ಕಾರದ ಈ ಕ್ರಮವು ನಾಗರಿಕರಿಗೆ ಸಾಮಾಜಿಕ-ಅಂತರವನ್ನು ಕಾಯ್ದುಕೊಂಡು ಸಾರಿಗೆ ಸಂಬಂಧಿತ ಸೇವೆಗಳನ್ನು ಪಡೆಯಲು ಸಹಾಯ ಮಾಡುವ ನಿರೀಕ್ಷೆಯಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.