ಬೆಂಗಳೂರು: ಬಿಎಂಟಿಸಿಯ ಬಹುನಿರೀಕ್ಷಿತ ಇ – ಬಸ್ಗೆ ಇಂದು ಸಚಿವ ಬಿ. ಶ್ರೀರಾಮುಲು ಅವರು ಚಾಲನೆ ನೀಡಿದ್ದಾರೆ.
ಅವರು ಕೆಂಗೇರಿಯ ಬಸ್ ಡಿಪೋದಲ್ಲಿ ಈ ವಾಹನಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇದನ್ನು ಉತ್ತರ ಪ್ರದೇಶ ಮೂಲದ ಜೆಬಿಎಂ ಅಟೋ ಲಿ. ಸಂಸ್ಥೆಯು ತಯಾರಿಸಿದೆ. ಇದನ್ನು ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ ಸರಾಸರಿ 220 ಕಿಮೀ ಸಂಚಾರ ಮಾಡುವ ಸಾಮರ್ಥ್ಯವನ್ನು ಹೊಂದಿದೆ.
ಸ್ಮಾರ್ಟ್ ಸಿಟಿ ಯೋಜನೆಯಡಿ ತಯಾರಾಗಿರುವ ಈ ಬಸ್ಸಿನ ಮೌಲ್ಯ ಸುಮಾರು 90 ಲಕ್ಷವಾಗಿದೆ. ಈ ಬಸ್ಸುಗಳಿಗಾಗಿ ಒಟಿ 130 ಕೋಟಿ ರೂ. ಗಳನ್ನು ಮೀಸಲಿಡಲಾಗಿದೆ. ಡಿಸೆಂಬರ್ ಅಂತ್ಯದ ವೇಳೆಗೆ 93 ಬಸ್ಸುಗಳು ರಸ್ತೆಗಿಳಿಯುವ ಸಾಧ್ಯತೆ ಇದೆ. ಆರ್ಟಿಒ ಪ್ರಕ್ರಿಯೆಗಳು ಸಂಪೂರ್ಣವಾದ ಬಳಿಕ 33 ಸೀಟುಗಳ ಬಸ್ ಪ್ರಾಯೋಗಿಕ ಸಂಚಾರವನ್ನು ಕೆಂಗೇರಿಯಿಂದ ಆರಂಭ ಮಾಡಲಿದೆ.
ಈ ಬಸ್ಗಳು ಅಟೋಮೆಟಿಕ್ ತಂತ್ರಜ್ಞಾನದ ಜೊತೆಗೆ, ಸಿಸಿ ಕೆಮರಾ, ಲೈಟ್, ಸ್ಟಾಪ್ ಸಿಗ್ನಲ್ ಸೇರಿದಂತೆ ಇನ್ನೂ ಹಲವು ಸೌಲಭ್ಯಗಳನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.