ಚೆನ್ನೈ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೋಮವಾರ ಚೆನ್ನೈನಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ಪ್ರದರ್ಶನವನ್ನು ಆಯೋಜಿಸಿತ್ತು. ಚಂದ್ರಯಾನ ಮತ್ತು ಮಂಗಳಯಾನದ ಚಿಕ್ಕ ಮಾದರಿಗಳು ಸೇರಿದಂತೆ ಇಸ್ರೋದ ಇತರ ಕಾರ್ಯಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ.
ಈ ಎಕ್ಸ್ಪೋವನ್ನು ಎಲ್ಇಡಿ ಸ್ಕ್ರೀನ್ಗಳನ್ನು ಹೊಂದಿದ ಬಸ್ಸಿನೊಳಗೆ ಆಯೋಜಿಸಲಾಗಿತ್ತು. ವಿವಿಧ ಶಾಲೆಗಳ 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳು ಪ್ರದರ್ಶನದಲ್ಲಿ ಭಾಗವಹಿಸಿದ್ದರು.
ಇಸ್ರೋ ಅಧಿಕಾರಿಗಳು ಉಪಗ್ರಹವನ್ನು ಹೇಗೆ ಉಡಾಯಿಸಲಾಗಿದೆ ಮತ್ತು ದೇಶದ ಕಲ್ಯಾಣಕ್ಕೆ ಅವು ಹೇಗೆ ಉಪಯುಕ್ತವಾಗಿದೆ ಎಂಬುದನ್ನು ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ವಿವರಿಸಿದ್ದಾರೆ.
“ಇದು ನಮ್ಮ ಅಧ್ಯಯನಕ್ಕೆ ಬಹಳ ಸಹಾಯಕವಾಗಿದೆ. ಚಂದ್ರಯಾನ I ಮತ್ತು II ರ ಉಡಾವಣೆಯ ಬಗ್ಗೆ ನಮಗೆ ವಿವರಿಸಲಾಯಿತು. ಬಸ್ಸಿನಲ್ಲಿ ಎಕ್ಸ್ಪೋವನ್ನು ಆಯೋಜಿಸುವ ಉಪಕ್ರಮವು ಅದ್ಭುತವಾದುದು. ಇದರಿಂದ ನಾವು ತುಂಬಾ ಕಲಿತೆವು” ಎಂದು ವಿದ್ಯಾರ್ಥಿನಿಯೊಬ್ಬರು ಹೇಳಿದ್ದಾರೆ.
“ನಾವು ಈ ಎಕ್ಸ್ಪೋವನ್ನು ನೋಡಲು ತುಂಬಾ ಉತ್ಸುಕರಾಗಿದ್ದೇವೆ. ಇದು ನಮ್ಮ ಪುಸ್ತಕಗಳಲ್ಲಿನ ಸಿದ್ಧಾಂತಗಳಿಗೆ ಸಂಬಂಧಿಸಿರುವ ಪ್ರಾಯೋಗಿಕ ಸೆಷನ್ನಂತಿದೆ. ಇದು ನಮ್ಮಲ್ಲಿ ಬಾಹ್ಯಾಕಾಶ ವಿಜ್ಞಾನದ ಕುರಾತು ಆಸಕ್ತಿಯನ್ನು ಹುಟ್ಟುಹಾಕಿತು” ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.