ನವದೆಹಲಿ: ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಅವರು ಉಜ್ಬೇಕಿಸ್ತಾನ ಭೇಟಿಯಲ್ಲಿದ್ದಾರೆ, ಈ ವೇಳೆ ಅವರು ತಾಷ್ಕೆಂಟ್ ಸ್ಟೇಟ್ ಯೂನಿವರ್ಸಿಟಿ ಆಫ್ ಲಾ ಫ್ಯಾಕಲ್ಟಿ ಸದಸ್ಯರಿಗೆ ಉಡುಗೊರೆಯಾಗಿ ಉಜ್ಬೇಕ್ ಭಾಷೆಗೆ ಅನುವಾದಿಸಿದ ಭಾರತದ ಸಂವಿಧಾನದ 1000 ಪ್ರತಿಗಳನ್ನು ವಿತರಿಸುವುದಾಗಿ ಘೋಷಿಸಿದ್ದಾರೆ.
” ಕಾನೂನು ಮೂಲಗಳಿಗೆ ಮತ್ತೆ ಹಿಂತಿರುಗಲು ಸಂತೋಷವಾಗಿದೆ” ಎಂದು ದೆಹಲಿ ಸಂಸದೆ ಮತ್ತು ಖ್ಯಾತ ವಕೀಲೆಯೂ ಆಗಿರುವ ಲೇಖಿ ಹೇಳಿದ್ದಾರೆ.
“ಆಜಾದಿ ಕಾ ಅಮೃತ್ ಮಹೋತ್ಸವದ ಸಂದರ್ಭದಲ್ಲಿ ಭಾರತದ ಪ್ರಜಾಪ್ರಭುತ್ವದ ಸಂಪ್ರದಾಯಗಳ ಕುರಿತು ತಾಷ್ಕೆಂಟ್ ಕಾನೂನು ವಿಶ್ವವಿದ್ಯಾಲಯದಲ್ಲಿ ಮಾತನಾಡಿದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಉಜ್ಬೆಕ್ ಭಾಷೆಗೆ ಭಾಷಾಂತರಿಸಿದ ಭಾರತೀಯ ಸಂವಿಧಾನದ 1000 ಪ್ರತಿಗಳನ್ನು ಟಿಎಸ್ಯುಎಲ್ನ ಕಾನೂನು ಅಧ್ಯಾಪಕರಿಗೆ ಉಡುಗೊರೆಯಾಗಿ ನೀಡಲಾಗುವುದು ಎಂದ
ತಿಳಿಸಲು ಸಂತೋಷವಾಗಿದೆ ಎಂದಿದ್ದಾರೆ.
ಲೇಖಿ ತಾಷ್ಕೆಂಟ್ನಲ್ಲಿರುವ ಶಾಸ್ತ್ರಿ ಸ್ಮಾರಕಕ್ಕೆ ಭೇಟಿ ನೀಡಿದರು ಮತ್ತು ಭಾರತದ ಎರಡನೇ ಪ್ರಧಾನಿ ದಿವಂಗತ ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ ಪುಷ್ಪನಮನ ಸಲ್ಲಿಸಿದರು.
“ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸ್ಮರಣೆಗೆ ಉಜ್ಬೇಕಿಸ್ತಾನ್ ಜನರು ನೀಡಿದ ಗೌರವವನ್ನು ನೋಡಿ ಸಂತೋಷವಾಗಿದೆ” ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.