ನವದೆಹಲಿ: ಮೋದಿ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ 28 ಮಿಲಿಯನ್ಗಿಂತಲೂ ಹೆಚ್ಚು ವಿದ್ಯುತ್ ಸಂಪರ್ಕವಿಲ್ಲದ ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು ಒದಗಿಸಿದೆ.
ಕೇಂದ್ರ ಸರ್ಕಾರವು ಸೌಭಾಗ್ಯ (ಪ್ರಧಾನ ಮಂತ್ರಿ ಸಹಜ್ ಬಿಜ್ಲಿ ಹರ್ ಘರ್ ಯೋಜನೆ) ಯೋಜನೆಯನ್ನು ಆರಂಭಿಸಿದ ನಂತರ ಸುಮಾರು 2.82 ಕೋಟಿ ಮನೆಗಳಿಗೆ ವಿದ್ಯುತ್ ವ್ಯವಸ್ಥೆ ಮಾಡಲಾಗಿದೆ. ಈ ಅಂಕಿಅಂಶಗಳು ಈ ವರ್ಷದ ಮಾರ್ಚ್ 31 ರವರೆಗಿನದ್ದಾಗಿದೆ.
ಮಾರ್ಚ್ 2019 ರ ವೇಳೆ, ದೇಶದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ 2.63 ಕೋಟಿ ವಿದ್ಯುತ್ ರಹಿತ ಮನೆಗಳಿಗೆ 18 ತಿಂಗಳ ದಾಖಲೆಯ ಸಮಯದಲ್ಲಿ ವಿದ್ಯುತ್ ಸಂಪರ್ಕವನ್ನು ಒದಗಿಸಲಾಗಿದೆ.
ನಂತರ, ಏಳು ರಾಜ್ಯಗಳಾದ ಅಸ್ಸಾಂ, ಛತ್ತೀಸ್ಗಢ, ಜಾರ್ಖಂಡ್, ಕರ್ನಾಟಕ, ಮಣಿಪುರ, ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಸುಮಾರು 18.85 ಲಕ್ಷ ವಿದ್ಯುತ್ ರಹಿತ ಮನೆಗಳು ವಿದ್ಯುತ್ ಸಂಪರ್ಕ ಪಡೆಯಲು ಇಚ್ಛೆ ವ್ಯಕ್ತಪಡಿಸಿ ಈ ಯೋಜನೆಗೆ ಒಳಪಟ್ಟವು.
ಸೌಭಾಗ್ಯ ಯೋಜನೆಯು ವಿಶ್ವದ ಅತ್ಯಂತ ವ್ಯಾಪಕವಾದ ಮನೆ ವಿದ್ಯುದ್ದೀಕರಣ ಅಭಿಯಾನಗಳಲ್ಲಿ ಒಂದಾಗಿದೆ. ಸೌಭಾಗ್ಯವನ್ನು 25 ಸೆಪ್ಟೆಂಬರ್ 2017 ರಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು.
ಕೊನೆಯ ಮೈಲಿ ಸಂಪರ್ಕದ ಮೂಲಕ ಸಾರ್ವತ್ರಿಕ ಮನೆಯ ವಿದ್ಯುದೀಕರಣವನ್ನು ಸಾಧಿಸುವುದು ಮತ್ತು ಗ್ರಾಮೀಣ ಪ್ರದೇಶದ ಎಲ್ಲ ವಿದ್ಯುತ್ ರಹಿತ ಮನೆಗಳಿಗೆ ಮತ್ತು ನಗರ ಪ್ರದೇಶದ ಬಡ ಕುಟುಂಬಗಳಿಗೆ ವಿದ್ಯುತ್ ಸಂಪರ್ಕವನ್ನು ಒದಗಿಸುವುದು ಯೋಜನೆಯ ಉದ್ದೇಶವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.