ನವದೆಹಲಿ: ವಿಶ್ವಸಂಸ್ಥೆ ನಿಷೇಧಿಸಿದ ಹೆಚ್ಚಿನ ಸಂಖ್ಯೆಯ ಭಯೋತ್ಪಾದಕರಿಗೆ ಆತಿಥ್ಯ ನೀಡುವ ಪಾಕಿಸ್ದಾನವು ಒಂದು ಕೆಟ್ಟ ದಾಖಲೆಯನ್ನು ಹೊಂದಿದೆ, ಭಯೋತ್ಪಾದನೆಗೆ ಬಹಿರಂಗವಾಗಿ ಬೆಂಬಲಿಸುವ ದೇಶವೆಂದು ಪಾಕಿಸ್ಥಾನ ಜಾಗತಿಕವಾಗಿ ಪರಿಗಣಿಸಲ್ಪಟ್ಟಿದೆ ಎಂದು ಭಾರತ ವಿಶ್ವಸಂಸ್ಥೆಯಲ್ಲಿ ಹೇಳಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕಾಶ್ಮೀರವನ್ನು ಉಲ್ಲೇಖಿಸಿದ ಪಾಕಿಸ್ಥಾನಕ್ಕೆ ದಿಟ್ಟ ಪ್ರತ್ಯುತ್ತರವನ್ನು ನೀಡಿದ ಭಾರತ, “ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ನ ಸಂಪೂರ್ಣ ಕೇಂದ್ರಾಡಳಿತ ಪ್ರದೇಶಗಳು ಭಾರತದ ಅವಿಭಾಜ್ಯ ಭಾಗ ಮತ್ತು ಎಂದಿಗೂ ಅದನ್ನು ಭಾರತದಿಂದ ಬೇರ್ಪಡಿಸಲಾಗದು” ಎಂದು ಪುನರುಚ್ಚರಿಸಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಇಮ್ರಾನ್ ಖಾನ್ ಅವರ ಹೇಳಿಕೆಗಳಿಗೆ ಉತ್ತರಿಸುವ ಹಕ್ಕನ್ನು ಚಲಾಯಿಸಿದ ಭಾರತ, “ಪಾಕಿಸ್ಥಾನವು ಭಯೋತ್ಪಾದಕರಿಗೆ ಆಶ್ರಯ ನೀಡುವ, ಸಹಾಯ ಮಾಡುವ ಮತ್ತು ಸಕ್ರಿಯವಾಗಿ ಬೆಂಬಲಿಸುವ ನೀತಿಯನ್ನು ಹೊಂದಿದೆ” ಎಂದು ಹೇಳಿದೆ.
“ಯುಎನ್ಎಸ್ಸಿ (ವಿಶ್ವಸಂಸ್ಥೆಯ ಭದ್ರತಾ ಮಂಡಳಿ)ಯಿಂದ ನಿಷೇಧಿಸಲ್ಪಟ್ಟ ಅತಿ ಹೆಚ್ಚು ಸಂಖ್ಯೆಯ ಭಯೋತ್ಪಾದಕರಿಗೆ ಆತಿಥ್ಯ ನೀಡುವ ಮೂಲಕ ಪಾಕಿಸ್ಥಾನವು ಅವಿವೇಕದ ದಾಖಲೆಯನ್ನು ಹೊಂದಿದೆ. ಒಸಾಮಾ ಬಿನ್ ಲಾಡೆನ್ ಪಾಕಿಸ್ತಾನದಲ್ಲಿ ಆಶ್ರಯ ಪಡೆದಿದ್ದ. ಇಂದಿಗೂ, ಪಾಕಿಸ್ಥಾನದ ನಾಯಕತ್ವವು ಅವನನ್ನು ಹುತಾತ್ಮ ಎಂದು ವೈಭವೀಕರಿಸುತ್ತದೆ” ಎಂದು ಯುಎನ್ನಲ್ಲಿ ಭಾರತದ ಮೊದಲ ಕಾರ್ಯದರ್ಶಿ ಸ್ನೇಹಾ ದುಬೆ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.