ನವದೆಹಲಿ: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ಯುಎಸ್ ಉಪಾಧ್ಯಕ್ಷೆ ಕಮಲ ಹ್ಯಾರಿಸ್ ಸೇರಿದಂತೆ ಹಲವಾರು ಗಣ್ಯರನ್ನು, ಕ್ವಾಡ್ ನಾಯಕರನ್ನು ಭೇಟಿ ಮಾಡಿದ್ದಾರೆ. ಭೇಟಿಯ ಸಂದರ್ಭದಲ್ಲಿ ಈ ನಾಯಕರಿಗೆ ಮೋದಿ ನೀಡಿದ ಉಡುಗೊರೆ ಎಲ್ಲರ ಗಮನ ಸೆಳೆದಿದೆ.
ಜನವರಿ ತಿಂಗಳಲ್ಲಿ ಅಮೆರಿಕದ ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಭಾರತೀಯ ಮೂಲದ ಕಮಲ ಹ್ಯಾರಿಸ್ ಅವರನ್ನು ಮೊದಲ ಬಾರಿಗೆ ಭೇಟಿಯಾದ ಮೋದಿ ಸಾಂಕ್ರಾಮಿಕ ರೋಗ ಮತ್ತು ಭಯೋತ್ಪಾದನೆಗೆ ಪಾಕಿಸ್ತಾನದ ಕೊಡುಗೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತುಕತೆ ನಡೆಸಿದರು. ಈ ಮಾತುಕತೆಯನ್ನು ಉಭಯ ನಾಯಕರು ಫಲಪ್ರದ ಎಂದು ಬಣ್ಣಿಸಿದ್ದಾರೆ. ಈ ವೇಳೆ ಮೋದಿ ಹ್ಯಾರಿಸ್ ಅವರಿಗೆ ನೀಡಿದ ಉಡುಗೊರೆ ಹೆಚ್ಚು ಗಮನ ಸೆಳೆದಿದೆ.
ಉತ್ತರಪ್ರದೇಶದ ವಾರಣಾಸಿಯ ಚೆಸ್ ಬೋರ್ಡ್ ಅನ್ನು ಉಡುಗೊರೆಯಾಗಿ ಕಮಲಾ ಅವರಿಗೆ ಮೋದಿ ನೀಡಿದ್ದಾರೆ. ವಿಶ್ವದ ಅತಿ ಪುರಾತನ ನಗರವಾದ ಕಾಶಿಗೆ ಸಂಬಂಧಿಸಿದ ಗುಲಾಬಿ ಮೀನಾಕರಿ ಕರಕುಶಲ ಕಲೆಯನ್ನು ಬಳಸಿ ಎಚ್ಎಸ್ ಬೋರ್ಡನ್ನು ತಯಾರಿಸಲಾಗಿದೆ. ಚೆಸ್ ಬೋರ್ಡ್ನ ಪ್ರತಿಯೊಂದು ತುಂಡು ಕೂಡ ಅದ್ಭುತ ರೀತಿಯಲ್ಲಿ ಮೂಡಿಬಂದಿದೆ.
ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಅವರಿಗೆ ಮೋದಿ ಸಿಲ್ವರ್ ಗುಲಾಬಿ ಮೀನಕರಿ ಶಿಪ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದು ಕೂಡ ಕಾಶಿಯ ಕ್ರಿಯಾಶೀಲತೆಯನ್ನು ಎತ್ತಿ ತೋರಿಸುತ್ತದೆ. ಜಪಾನ್ ಪ್ರಧಾನಿಯವರಿಗೆ ಮೋದಿ ಗಂಧದ ಮರದಲ್ಲಿ ಕೆತ್ತಿದ ಬುದ್ಧನ ವಿಗ್ರಹವನ್ನು ಉಡುಗೊರೆಯಾಗಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.