ಬೆಂಗಳೂರು: ದೇಶದಲ್ಲಿ ಎಲ್ಲಕ್ಕೂ ಕಾನೂನಿದೆ. ಆದರೆ ಅತ್ಯಾಚಾರ ಸಂದರ್ಭದಲ್ಲಿ ಅಪರಾಧಿಗಳಿಗೆ ಮಾತ್ರ ಕಠಿಣ ಶಿಕ್ಷೆ ಮಾತ್ರ ಇಲ್ಲದಿರುವುದು ದುರಾದೃಷ್ಟ ಎಂದು ಬಿಜೆಪಿಯ ಭಾರತಿ ಶೆಟ್ಟಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಮಾತನಾಡಿದ ಅವರು, ಅತ್ಯಾಚಾರಿಗಳಿಗೆ ಕಠಿಣ ಏಕಾಂತ ಶಿಕ್ಷೆ ನೀಡಬೇಕು. ಆ ಬಳಿಕ ಅವರಿಗೆ ಅವರ ತಪ್ಪಿಗೆ ಅನುಸಾರವಾಗಿ ಕಠಿಣ ಶಿಕ್ಷೆ ನೀಡಬೇಕು. ಅತ್ಯಾಚಾರದಂತಹ ಸಂದರ್ಭದಲ್ಲಿ ಮಹಿಳೆ ಮಾತ್ರ ಸಂತ್ರಸ್ತಳಾಗಿ, ನೋವನುಭವಿಸುವಂತಾಗಿದೆ. ಆದರೆ ಅದೇ ರೀತಿಯಲ್ಲಿ ಅತ್ಯಾಚಾರ ಮಾಡಿದಾತನೂ ಕಠಿಣ ಶಿಕ್ಷೆ ಅನುಭವಿಸುವಂತಾಗಬೇಕು. ಅಂತಹ ಕಾನೂನು ನಮ್ಮಲ್ಲಿ ಬರಬೇಕು ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಅಪರಿಚಿತರಿಂದ ಹೆಚ್ಚು ಪರಿಚಿತರೇ ಅತ್ಯಾಚಾರ ಮಾಡುತ್ತಿದ್ದಾರೆ. ನಮ್ಮ ಸಂಸ್ಕೃತಿ ಮರೆತು ಅತ್ಯಾಚಾರ, ಅನಾಚಾರ ನಡೆಯುತ್ತಿದೆ. ವಿದೇಶದ ಲಿವಿಂಗ್ ಟುಗೆದರ್ ಸಂಸ್ಕೃತಿ ಮಾನ್ಯ ಮಾಡುವ ನಾವು, ಅತ್ಯಾಚಾರಿಗಳಿಗೆ ಶಿಕ್ಷೆ ಪ್ರಕಟಿಸುವಲ್ಲಿ ನಾವು ಹಿಂದೆ ಬಿದ್ದಿರುವುದು ದುರಂತ ಎಂದಿದ್ದಾರೆ. ಈ ಸಂಬಂಧ ಶಾಲೆಗಳಲ್ಲಿಯೇ ವಿದ್ಯಾರ್ಥಿಗಳಿಗೆ ಶಿಕ್ಷಣ ದೊರೆಯುವಂತಾಗಬೇಕು ಎಂದು ಅವರು ತಿಳಿಸಿದ್ದಾರೆ. ಹಾಗೆಯೇ ಅತ್ಯಾಚಾರ ಆರೋಪಿಗಳಿಗೆ ನೀಡಲಾಗುವ ಶಿಕ್ಷೆಯ ಭಯವನ್ನು ಸಹ ಜನರಲ್ಲಿ ಹುಟ್ಟಿಸಬೇಕು ಎಂದು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.