ನವದೆಹಲಿ: ಕಳೆದ 24 ಗಂಟೆಗಳಲ್ಲಿ 72,20,642 ಲಸಿಕೆ ಡೋಸ್ಗಳನ್ನು ನೀಡುವುದರೊಂದಿಗೆ ಭಾರತದ ಕೋವಿಡ್ -19 ಲಸಿಕೆ ವ್ಯಾಪ್ತಿಯು ಸೆಪ್ಟೆಂಬರ್ 24ರ ಬೆಳಿಗ್ಗೆ 7 ಗಂಟೆಯವರೆಗೆ 84 ಕೋಟಿ (84,15,18,026) ಗಡಿ ದಾಟಿದೆ. 82,33,242 ಸೆಷನ್ಗಳ ಮೂಲಕ ಈ ಸಾಧನೆಯನ್ನು ಮಾಡಲಾಗಿದೆ.
ಕಳೆದ 24 ಗಂಟೆಗಳಲ್ಲಿ 32,542 ರೋಗಿಗಳ ಚೇತರಿಕೆಯಾಗಿದ್ದು, ಈ ಮೂಲಕ ಚೇತರಿಸಿಕೊಂಡ ರೋಗಿಗಳ ಒಟ್ಟು ಸಂಖ್ಯೆ 3,28,48,273 ಕ್ಕೆ ಹೆಚ್ಚಿದೆ. ಭಾರತದ ಚೇತರಿಕೆಯ ದರವು 97.78%ರಷ್ಟಿದೆ.
ಚೇತರಿಕೆ ದರವು ಮಾರ್ಚ್ 2020 ರಿಂದ ಪ್ರಸ್ತುತ ಗರಿಷ್ಠ ಮಟ್ಟದಲ್ಲಿದೆ.
ಕೇಂದ್ರ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ನಿರಂತರ ಪ್ರಯತ್ನಗಳಿಂದ ದಿನಕ್ಕೆ 50,000 ಕ್ಕೂ ಕಡಿಮೆ ಪ್ರಕರಣಗಳು ಪ್ರಸ್ತುತ ವರದಿಯಾಗುತ್ತಿವೆ, ಸತತ 89 ದಿನಗಳಿಂದ ಈ ಬೆಳವಣಿಗೆ ಇದೆ.
ಕಳೆದ 24 ಗಂಟೆಗಳಲ್ಲಿ 31,382 ಹೊಸ ಪ್ರಕರಣಗಳು ವರದಿಯಾಗಿವೆ. ಸಕ್ರಿಯ ಪ್ರಕರಣ ಪ್ರಸ್ತುತ 3,00,162 ಆಗಿದೆ. ಸಕ್ರಿಯ ಪ್ರಕರಣಗಳು ಪ್ರಸ್ತುತ ದೇಶದ ಒಟ್ಟು ಪಾಸಿಟಿವ್ ಪ್ರಕರಣಗಳಲ್ಲಿ 0.89% ರಷ್ಟಿದೆ. ಇದು ಮಾರ್ಚ್ 2020 ರ ನಂತರ ಭಾರತದಲ್ಲಿ ಸಕ್ರಿಯ ಪ್ರಕರಣಗಳಲ್ಲಿನ ಕನಿಷ್ಠ ಅಂಕಿ ಅಂಶವಾಗಿದೆ.
ದೇಶಾದ್ಯಂತ ಕೋವಿಡ್ ಪರೀಕ್ಷಾ ಸಾಮರ್ಥ್ಯವನ್ನು ವಿಸ್ತರಿಸಲಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 15,65,696 ಪರೀಕ್ಷೆಗಳನ್ನು ನಡೆಸಲಾಗಿದೆ. ಭಾರತವು ಇದುವರೆಗೆ 55.99 ಕೋಟಿ (55,99,32,709) ಪರೀಕ್ಷೆಗಳನ್ನು ನಡೆಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.