ನವದೆಹಲಿ: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಜಪಾನಿನ ಪ್ರಧಾನಿ ಸುಗ ಯೋಶಿಹೈಡ್ ಅವರೊಂದಿಗೆ ಸಭೆ ನಡೆಸಿದ್ದಾರೆ ಮತ್ತು ಭಾರತ-ಜಪಾನ್ ನಡುವಿನ ಸ್ನೇಹವು ಇಡೀ ಜಗತ್ತಿಗೆ ಒಳಿತು ಎಂದು ಬಣ್ಣಿಸಿದ್ದಾರೆ.
ಕ್ವಾಡ್ ಲೀಡರ್ಸ್ ಶೃಂಗಸಭೆಯ ಸೈಡ್ಲೈನ್ನಲ್ಲಿ ಉಭಯ ನಾಯಕರ ನಡುವೆ ಸಭೆ ನಡೆದಿದೆ, ಸಭೆಯಲ್ಲಿ ಮೋದಿ ಜಪಾನ್ ಮತ್ತು ಭಾರತವನ್ನು ಅತ್ಯಂತ ಮೌಲ್ಯಯುತ ಪಾಲುದಾರರು ಎಂದು ಕರೆದಿದ್ದಾರೆ.
“ಜಪಾನ್ ಭಾರತದ ಅತ್ಯಂತ ಮೌಲ್ಯಯುತ ಪಾಲುದಾರರಲ್ಲಿ ಒಂದಾಗಿದೆ. ನಾನು ನಮ್ಮ ರಾಷ್ಟ್ರಗಳ ನಡುವಿನ ಸಹಕಾರವನ್ನು ಮತ್ತಷ್ಟು ಹೆಚ್ಚಿಸುವ ವಿವಿಧ ವಿಷಯಗಳ ಕುರಿತು ಪಿಎಂ ಸುಗಾ ಯೊಶಿಹಿಡೆ ಅವರೊಂದಿಗೆ ಅತ್ಯುತ್ತಮವಾದ ಸಭೆಯನ್ನು ನಡೆಸಿದ್ದೇನೆ. ಬಲವಾದ ಭಾರತ-ಜಪಾನ್ ಸ್ನೇಹವು ಇಡೀ ಜಗತ್ತಿಗೆ ಉತ್ತಮವಾಗಿದೆ” ಎಂದಿದ್ದಾರೆ.
Japan is one of India’s most valued partners. I had an excellent meeting with PM @sugawitter on a variety of subjects that would further boost cooperation between our nations. A strong India-Japan friendship augurs well for the entire planet. pic.twitter.com/5N9ibqWDzy
— Narendra Modi (@narendramodi) September 24, 2021
ಕೋವಿಡ್ -19 ರ ನಂತರದ ಅವಧಿಯಲ್ಲಿ ಇಬ್ಬರು ನಾಯಕರ ನಡುವಿನ ಮೊದಲ ವ್ಯಕ್ತಿಗತ ಭೇಟಿ ಇದಾಗಿದ್ದು, ಭಾರತ ಮತ್ತು ಜಪಾನ್ನ ಕಾರ್ಯ ತಾಂತ್ರಿಕ ಪಾಲುದಾರಿಕೆ ಮತ್ತು ಜಾಗತಿಕ ಪಾಲುದಾರಿಕೆಯಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಲು ವೈಯಕ್ತಿಕ ಬದ್ಧತೆ ಮತ್ತು ನಾಯಕತ್ವಕ್ಕ ನೀಡುತ್ತಿರುವ ಸುಗಾಗೆ ಮೋದಿ ಧನ್ಯವಾದಗಳನ್ನು ಅರ್ಪಿಸಿದರು.
ಜಾಗತಿಕ ಸಾಂಕ್ರಾಮಿಕದ ಮಧ್ಯೆ ಟೋಕಿಯೊ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ ಕ್ರೀಡಾಕೂಟವನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಜಪಾನಿನ ಪ್ರಧಾನಮಂತ್ರಿಯವರನ್ನು ಮೋದಿ ಅಭಿನಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.