ನವದೆಹಲಿ: 2011ರ ಧರ್ಮಾಧರಿತ ಜಣಗಣತಿಯ ಫಲಿತಾಂಶವನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಶೇ.80ರಷ್ಟಿದ್ದ ಹಿಂದೂ ಧರ್ಮಿಯರ ಸಂಖ್ಯೆ ಇದೀಗ 79.8ಕ್ಕೆ ಇಳಿಕೆಯಾಗಿದೆ ಎಂಬ ಅಂಶ ಬಹಿರಂಗವಾಗಿದೆ.
ಮುಸ್ಲಿಂಮರ ಜನಸಂಖ್ಯೆ 2001-2011ರ ಸಾಲಿನಲ್ಲಿ ಶೇ.೦.8ರಷ್ಟು ಏರಿಕೆಯಾಗಿದ್ದು, ಪ್ರಸ್ತುತ ಒಟ್ಟು ಜನಸಂಖ್ಯೆಯ ಶೇ.14.2ರಷ್ಟು ಇದ್ದಾರೆ. ಮುಸ್ಲಿಂರನ್ನು ಹೊರತುಪಡಿಸಿ ಉಳಿದ ಎಲ್ಲಾ ಧಾರ್ಮಿಕ ಸಮುದಾಯದ ಜನಸಂಖ್ಯೆ ಇಳಿಕೆ ಕಂಡಿದೆ.
ಶೇ.2.3ರಷ್ಟು ಕ್ರೈಸ್ಥರು, ಶೇ.1.7ರಷ್ಟು ಸಿಖ್ಖರು, ಶೇ.0.7ರಷ್ಟು ಬೌದ್ಧರು, ಶೇ.0.4ರಷ್ಟು ಜೈನರು ದೇಶದಲ್ಲಿದ್ದಾರೆ. ಬೌದ್ಧ ಮತ್ತು ಸಿಖ್ಖ್ ಜನಸಂಖ್ಯಾ ಅಭಿವೃದ್ಧಿ ದರದಲ್ಲೂ ಕುಂಠಿತವಾಗಿದೆ. ಆದರೆ ಜೈನ ಮತ್ತು ಕ್ರೈಸ್ಥ ಜನಸಂಖ್ಯೆ ಸ್ಥಿರವಾಗಿದ್ದು, ಹೆಚ್ಚಿನ ಬದಲಾವಣೆ ಕಂಡಿಲ್ಲ.
ದೇಶದಲ್ಲಿ ಒಟ್ಟು 121.09ರಷ್ಟು ಜನಸಂಖ್ಯೆಯಿದ್ದು, ಇದರಲ್ಲಿ 96.63 ಕೋಟಿ ಹಿಂದೂಗಳು, 17.22 ಕೋಟಿ ಮುಸ್ಲಿಮರು, 2.78 ಕೋಟಿ ಕ್ರೈಸ್ಥರು, 2.08 ಕೋಟಿ ಸಿಖ್ಖರು, 0.84 ಕೋಟಿ ಬೌದ್ಧರು, 0.45 ಕೋಟಿ ಜೈನರು, ಇತರ ಧರ್ಮಿಯರು 0.79 ಕೋಟಿ ಮತ್ತು ಯಾವುದೇ ಧರ್ಮದಲ್ಲಿ ಗುರುತಿಸಲ್ಪಡದವರು 0.29ಕೋಟಿ ಇದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.