ಬೆಂಗಳೂರು: ರಾಯಚೂರಿನ ಮಸ್ಕಿಯಲ್ಲಿ ಗಂಡುಗಲಿ ಕುಮಾರರಾಮನ ಸ್ಮಾರಕ ಅಭಿವೃದ್ಧಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 50 ಲಕ್ಷ ಅನುದಾನ ಮಂಜೂರು ಮಾಡಿದ್ದಾರೆ.
ಮಸ್ಕಿಯ ತಲೇಖಾನ ಗ್ರಾಮದಲ್ಲಿ ಗಂಡುಗಲಿ ಕುಮಾರರಾಮನ ಸ್ಮಾರಕದ ಅಭಿವೃದ್ಧಿಗೆ ಸುರಪುರ ಶಾಸಕ ರಾಜೂಗೌಡ ಅವರು ಸಿಎಂ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ್ದರು. ಇದೀಗ ಅವರ ಮನವಿಗೆ ಸ್ಪಂದಿಸಿರುವ ಸಿಎಂ 50 ಲಕ್ಷ ಅನುದಾನ ಒದಗಿಸಿದ್ದಾರೆ.
ಮಸ್ಕಿ ತಾಲೂಕಿನ ಪರನಾರಿ ಸಹೋದರ ಎಂದೇ ಖ್ಯಾತಿ ಪಡೆದಿರುವ ಗಂಡುಗಲಿ ಕುಮಾರ ರಾಮನ ಸಮಾಧಿ ಪುರಾತನವಾಗಿದ್ದು, ಇದನ್ನು ವೀಕ್ಷಣೆ ಮಾಡಲು ಅನೇಕ ಜನರು, ಸಂಶೋಧಕರು ಆಗಮಿಸುತ್ತಾರೆ. ಈ ಸ್ಥಳದ ಅಭಿವೃದ್ಧಿ ಅವಶ್ಯಕವಾಗಿದ್ದು, ಸ್ಮಾರಕ ಅಭಿವೃದ್ಧಿಗೆ 1 ಕೋಟಿ ರೂ. ಅನುದಾನಕ್ಕೆ ಮನವಿ ಮಾಡಿದ್ದರು. ಈ ಯೋಜನೆಗೆ ಸಿಎಂ ಬೊಮ್ಮಾಯಿ ಸಮ್ಮತಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.