ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಅಕ್ಟೋಬರ್ 7 ರಿಂದ ಆರಂಭವಾಗಲಿದ್ದು, ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿರುವ ಗಜಪಡೆಗಳಿಗೆ ನಿತ್ಯ ತಾಲೀಮು ನಡೆಯುತ್ತಿದೆ.
ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗಳಿಗೆ ಮೈಸೂರಿನಲ್ಲಿ ತರಬೇತಿ ನೀಡಲಾಗುತ್ತಿದೆ. ಅರಮನೆಯ ಆವರಣದಲ್ಲಿಯೇ ತರಬೇತಿ ನೀಡಲಾಗುತ್ತಿದ್ದು, ತರಬೇತಿ ನಿರತ ಆನೆಗಳಿಗೆ ಭಾರ ಹೊರಿಸುವ ಮೂಲಕ ಅವುಗಳನ್ನು ಜಂಬೂಸವಾರಿಗೆ ಸಿದ್ಧಗೊಳಿಸಲಾಗುತ್ತಿದೆ.
ತರಬೇತಿಯ ಮೂರನೇ ದಿನವಾದ ಇಂದು ಗೋಪಾಲಸ್ವಾಮಿ ಎಂಬ ಆನೆಗೆ 400 ಕೆ ಜಿ ಗಳಷ್ಟು ಭಾರವನ್ನು ಹೊರಿಸಿ ತರಬೇತಿ ನೀಡಲಾಯಿತು. ಈ ಆನೆಯ ಜೊತೆಗೆ ಉಳಿದ ಏಳು ಆನೆಗಳು ಹೆಜ್ಜೆ ಹಾಕಿದವು. ಈ ಬಾರಿ ಕೇವಲ ಮೂರು ಆನೆಗಳಿಗೆ ಮಾತ್ರವೇ ಭಾರ ಹೊರಿಸಿ ತಾಲೀಮು ನಡೆಸಲಾಗುತ್ತಿದೆ. ಮುಂದಿನ ಎರಡು ಮೂರು ದಿನಗಳಲ್ಲಿ ಮತ್ತಷ್ಟು ಹೆಚ್ಚು ಭಾರ ಹೊರಿಸುವ ಮೂಲಕ ಚಿನ್ನದ ಅಂಬಾರಿ ಹೊರಲು ಆನೆಯನ್ನು ಸಿದ್ಧಪಡಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.