ನವದೆಹಲಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಅವರು ಸೋಮವಾರ ದೆಹಲಿಯ ಏಮ್ಸ್ ಆಸ್ಪತ್ರೆಯ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಆ ಕೇಂದ್ರ ಆರೋಗ್ಯ ಸಚಿವ ಮಾನ್ಸೂಕ್ ಮಾಂಡವೀಯ ಕೂಡ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ನಡ್ಡಾ, “ದೇಶವ್ಯಾಪಿಯಾಗಿ ಎಲ್ಲರೂ ಕೂಡ ವಿಶ್ವದ ಅತಿ ದೊಡ್ಡ ಮತ್ತು ಅತಿ ವೇಗದ ಕೊರೊನಾ ವಿರುದ್ಧದ ಲಸಿಕಾ ಅಭಿಯಾನಕ್ಕೆ ಕೊಡುಗೆ ನೀಡಿದ್ದಾರೆ. ಕಡಿಮೆ ಸಮಯದಲ್ಲಿ ಅತಿದೊಡ್ಡ ಸಂಖ್ಯೆಗೆ ಲಸಿಕೆಯನ್ನು ನೀಡಲಾಗಿದೆ. ಸೆಪ್ಟೆಂಬರ್ 17ರಂದು ನಾವು ದಾಖಲೆ ನಿರ್ಮಾಣ ಮಾಡಿದ್ದೇವೆ ಮತ್ತು ಎರಡೂವರೆ ಕೋಟಿ ಜನಸಂಖ್ಯೆಗೆ ಲಸಿಕೆಯನ್ನು ಒಂದೇ ದಿನದಲ್ಲಿ ನೀಡಿದ್ದೇವೆ” ಎಂದಿದ್ದಾರೆ.
“ಪ್ರತಿಪಕ್ಷಗಳು ಲಸಿಕೆ ಕುರಿತಾದ ತಮ್ಮ ಹೇಳಿಕೆಯ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕು, ಲಸಿಕೆ ವಿಚಾರದಲ್ಲಿ ಪ್ರತಿಪಕ್ಷಗಳ ನಡವಳಿಕೆ ಬೇಜವಾಬ್ದಾರಿಯಿಂದ ಕೂಡಿದೆ” ಎಂದಿದ್ದಾರೆ.
“ಒಂದೇ ದಿನದಲ್ಲಿ ನಾವು ಎರಡುವರೆ ಕೋಟಿ ಜನಸಂಖ್ಯೆಗೆ ಲಸಿಕೆ ನೀಡಿದ್ದೇವೆ. ಪ್ರತಿಪಕ್ಷಗಳು ಈ ಬಗ್ಗೆ ಮೌನವಹಿಸಿವೆ. ಈ ಸಂದರ್ಭದಲ್ಲಿ ಕಳೆದ ವರ್ಷ ಪ್ರತಿಪಕ್ಷಗಳು ಲಸಿಕೆ ವಿಚಾರದಲ್ಲಿ ನೀಡಿರುವ ಹೇಳಿಕೆ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ತಮ್ಮ ಬೇಜವಾಬ್ದಾರಿಯ ಮತ್ತು ನಗೆಪಾಟಲಿಗೀಡಾಗುವ ಹೇಳಿಕೆಗಳನ್ನು ಅವುಗಳು ಪರಾಮರ್ಷೆ ಮಾಡಿಕೊಳ್ಳಬೇಕು” ಎಂದಿದ್ದಾರೆ.
भाजपा राष्ट्रीय अध्यक्ष श्री @JPNadda ने AIIMS, नई दिल्ली में वैक्सीनेशन सेंटर का अवलोकन किया।
उन्होंने 17 सितंबर को प्रधानमंत्री श्री नरेन्द्र मोदी जी के जन्म दिवस के अवसर पर 2.5 करोड़ लोगों का टीकाकरण कर विश्व रिकॉर्ड बनाने के लिए इस अभियान से जुड़े सभी लोगों को बधाई दी। pic.twitter.com/EMBz0MlVcz
— BJP (@BJP4India) September 20, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.