ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಪ್ರದೇಶಗಳಿಗೆ ಸೇರಿದ ಒಟ್ಟು 460 ತರಬೇತಿ ಪಡೆದ ಯುವಕರು ಶನಿವಾರ ಜಮ್ಮು ಮತ್ತು ಕಾಶ್ಮೀರ ಲೈಟ್ ಇನ್ಫಾಂಟ್ರಿ ಪಡೆ(JAKLI) ಸೇರ್ಪಡೆಗೊಂಡಿದ್ದಾರೆ. ನಿನ್ನೆ ಅವರು attestation ಪೆರೇಡ್ ನಡೆಸಿದ್ದಾರೆ.
ಚೆನ್ನೈನ ಕಮಾಂಡೆಂಟ್ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ ಮತ್ತು JAKLI ರೆಜಿಮೆಂಟ್ನ ಕರ್ನಲ್ ಲೆಫ್ಟಿನೆಂಟ್ ಜನರಲ್ ಎಂ ಕೆ ದಾಸ್ ನೇಮಕಾತಿ ಕೋರ್ಸ್ ಸರಣಿ ಸಂಖ್ಯೆ 126 ರ ಪೆರೇಡ್ ಪರಿಶೀಲಿಸಿದರು.
ಪಡೆಗೆ ಸೇರ್ಪಡೆಗೊಂಡ ಯುವ ಸೈನಿಕರಿಗೆ ಅವರು ತಮ್ಮ ಅಭಿನಂದನೆಗಳನ್ನು ಸಲ್ಲಿಸಿದರು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಹೆಚ್ಚಿನ ಯುವಕರನ್ನು ಭದ್ರತಾ ಪಡೆಗೆ ಸೇರುವಂತೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿನ ಅವರ ಕೊಡುಗೆಯನ್ನು ಶ್ಲಾಘಿಸಿದರು.
ಲೆಫ್ಟಿನೆಂಟ್ ಜನರಲ್ ದಾಸ್ ಈ ಉದಾತ್ತ ವೃತ್ತಿಯಲ್ಲಿ ಭಾಗವಹಿಸಲು ತಮ್ಮ ಮಕ್ಕಳನ್ನು ಪ್ರೇರೇಪಿಸುವಲ್ಲಿ ಪೋಷಕರ ಪಾತ್ರವನ್ನು ಒತ್ತಿ ಹೇಳಿದರು.
ಪೀರ್ ಸರ್ತಾಜ್ ಅಹ್ಮದ್ ವಾನಿಎಂಬುವವರಾಗೆ ತ್ರಿವೇಣಿ ಸಿಂಗ್ ಪದಕ ಮತ್ತು ಶೇರ್-ಇ-ಕಾಶ್ಮೀರ ಸ್ವೋರ್ಡ್ ಆಫ್ ಆನರ್ ಅನ್ನು ಅತ್ಯುತ್ತಮ ಪ್ರದರ್ಶನಕ್ಕಾಗಿ ಆಯ್ಕೆ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.