ನವದೆಹಲಿ: ರಾಮಮಂದಿರ ಟ್ರಸ್ಟ್ ಗುರುವಾರ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರದ ಮೊದಲ ಚಿತ್ರವನ್ನು ಬಹಿರಂಗಪಡಿಸಿದೆ. ಭವ್ಯ ದೇವಾಲಯದ ಅಡಿಪಾಯ ಈಗ ಪೂರ್ಣಗೊಂಡಿದೆ ಎಂದು ಟ್ರಸ್ಟ್ ಧೃಡಪಡಿಸಿದೆ.
ಮೊದಲ ಬಾರಿಗೆ ಟ್ರಸ್ಟ್ ಮಾಧ್ಯಮಕ್ಕೆ ಭವ್ಯ ಮಂದಿರದ ಸೈಟ್ನ ನೋಟವನ್ನು ತೋರಿಸಿದೆ.
ಮಂದಿರದ ಅಡಿಪಾಯವನ್ನು 48 ಪದರಗಳಲ್ಲಿ ತುಂಬಿಸಲಾಗಿದೆ, ಈ ಪದರಗಳನ್ನು ಒಟ್ಟು 11,000 ಘನ ಮೀಟರ್ಗಳಲ್ಲಿ ತುಂಬಿಸಲಾಗಿದೆ. ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ವಿವರಿಸಿದಂತೆ, ಮೊದಲ ಹಂತವು ಪೂರ್ಣಗೊಂಡಿದೆ ಮತ್ತು ಕರ್ನಾಟಕದ ಗ್ರಾನೈಟ್ ಮತ್ತು ಮಿರ್ಜಾಪುರದ ಮರಳುಗಳಿಂದ ಮಾಡಲ್ಪಟ್ಟ ಇನ್ನೊಂದು ಪದರವನ್ನು ಈ ಕಾಂಕ್ರೀಟ್ ಬೇಸ್ ಮೇಲೆ ಸ್ಥಾಪಿಸಲಾಗುತ್ತದೆ.
ರಾಜಸ್ಥಾನದ ಬನ್ಸಿ ಪಹಾರ್ಪುರ್ನಿಂದ ಒಂದು ಲಕ್ಷ ಘನ ಅಡಿಗಳಷ್ಟು ಕೆತ್ತಿದ ಕಲ್ಲಿನ ಚಪ್ಪಡಿಗಳು ಮುಂದಿನ ಹಂತದ ನಿರ್ಮಾಣಕ್ಕೆ ಸಿದ್ಧವಾಗಿವೆ ಎಂದು ಅವರು ಹೇಳಿದರು.
ವರದಿಗಳ ಪ್ರಕಾರ, ಈ ಅಡಿಪಾಯವು 50 ಅಡಿ ಆಳದಿಂದ ನಿರ್ಮಾಣವಾಗಿದೆ ಮತ್ತು 12 ಇಂಚುಗಳಷ್ಟು ಅಳತೆಯ ಸಿಮೆಂಟ್ ಪದರಗಳಿಂದ ತುಂಬಿದೆ.
ಮುಂದಿನ ಹಂತವು ಮುಂದಿನ ಎರಡು ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ, ಮೂರನೇ ಹಂತವು ಮೂರರಿಂದ ನಾಲ್ಕು ತಿಂಗಳವರೆಗೆ ತೆಗೆದುಕೊಳ್ಳಬಹುದು. ಬಳಿಕ ದೇವಾಲಯದ ಗರ್ಭಗುಡಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ, ಡಿಸೆಂಬರ್ 2023 ರೊಳಗೆ ರಾಮ್ ಲಲ್ಲಾ ಯಾತ್ರಾರ್ಥಿಗಳಿಗೆ ದರ್ಶನಕ್ಕೆ ಮುಕ್ತವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.