ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಹಾರಾಷ್ಟ್ರದ ನಾಂದೇಡ್ನ ಮುದ್ಖೇಡಿನಲ್ಲಿರುವ ಕೇಂದ್ರ ಮೀಸಲು ಪೊಲೀಸ್ ಪಡೆಯ ಪ್ರಾದೇಶಿಕ ತರಬೇತಿ ಕೇಂದ್ರದಲ್ಲಿ ಆಲ್ ಇಂಡಿಯಾ ಟ್ರೀ ಪ್ಲಾಂಟೇಶನ್ ಮಿಷನ್ -2021 ಅಡಿಯಲ್ಲಿ ಗಿಡನೆಟ್ಟಿದ್ದು, ಇದು ನೆಡಲಾದ 1 ಕೋಟಿಯನೇ ಗಿಡವಾಗಿದೆ.
ಪ್ರಧಾನ ಮಂತ್ರಿಯವರ ಜನ್ಮದಿನದಂದು ಒಂದು ಕೋಟಿಯನೇ ಸಸಿ ನೆಡಲಾಗಿದೆ ಎಂದು ಶಾ ಸಂತಸ ವ್ಯಕ್ತಪಡಿಸಿದರು.
“ನರೇಂದ್ರ ಮೋದಿಯವರು ಸ್ವಾತಂತ್ರ್ಯದ ನಂತರ ಹವಾಮಾನ ಬದಲಾವಣೆಯ ವಿಷಯಕ್ಕೆ ಪ್ರಾಮುಖ್ಯತೆ ನೀಡಿದ ಮೊದಲ ಮುಖ್ಯಮಂತ್ರಿ” ಎಂದರು.
ಅವರು ಮರಾಠವಾಡ ಮುಕ್ತಿ ಸಂಗ್ರಾಮದ ಹುತಾತ್ಮರಿಗೆ ಗೌರವ ಸಲ್ಲಿಸಿದರು. ಮರಾಠವಾಡ ಮುಕ್ತಿ ಸಂಗ್ರಾಮ, ಭಾರತ-ಚೀನಾ ಗಡಿ ಸೇರಿದಂತೆ ವಿವಿಧ ಘಟನೆಗಳ ಸಮಯದಲ್ಲಿ ಸಿಎಪಿಎಫ್ನ ಶೌರ್ಯವನ್ನು ಶಾ ನೆನಪಿಸಿಕೊಂಡರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.