ನವದೆಹಲಿ: ದೇಶದ ಬ್ಯಾಟರಿ ಶೇಖರಣಾ ಸಾಮರ್ಥ್ಯಕ್ಕೆ ದೊಡ್ಡ ಉತ್ತೇಜನ ಸಿಗುವ ಬೆಳವಣಿಗೆ ನಡೆಯುತ್ತಿದ್ದು, ಭಾರತವು ಶೀಘ್ರದಲ್ಲೇ 4,000 ಮೆಗಾವ್ಯಾಟ್-ಗಂಟೆ (MWh) ವಿದ್ಯುತ್ ಸಂಗ್ರಹ ಸಾಮರ್ಥ್ಯದ ಯೋಜನೆಗಳನ್ನು ಸ್ಥಾಪಿಸಲು ಜಾಗತಿಕ ಬಿಡ್ಗಳನ್ನು ಆಹ್ವಾನಿಸಲಿದೆ ಎಂದು ಮೂಲಗಳು ವರದಿ ಮಾಡಿವೆ.
ಕೇಂದ್ರ ಇಂಧನ ಸಚಿವ ಆರ್ ಕೆ ಸಿಂಗ್ ಘೋಷಣೆಯನ್ನು ಮಾಡಿದ್ದಾರೆ.
ಮುಂದಿನ ದಿನಗಳಲ್ಲಿ ಲಡಾಖ್ನಲ್ಲಿ 12 GW ಗಂಟೆಗಳ ಬ್ಯಾಟರಿ ಸಂಗ್ರಹ ಸಾಮರ್ಥ್ಯದ ಯೋಜನೆಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ.
2022 ರ ವೇಳೆಗೆ 175 GW ನವೀಕರಿಸಬಹುದಾದ ಇಂಧನ ಉತ್ಪಾದನಾ ಸಾಮರ್ಥ್ಯ ಮತ್ತು 2030 ರ ವೇಳೆಗೆ 450 GW ಸಾಮರ್ಥ್ಯವನ್ನು ಹೊಂದುವ ಸರ್ಕಾರದ ಘೋಷಿತ ಮಹತ್ವಾಕಾಂಕ್ಷೆಗೆ ಇದು ನೆರವಾಗುವುದರಿಂದ ಇದು ಮಹತ್ವ ಪಡೆದಿದೆ. ಒಟ್ಟು ಸ್ಥಾಪಿಸಲಾದ ನವೀಕರಿಸಬಹುದಾದ ಸಾಮರ್ಥ್ಯ 146 MW. ಇನ್ನೂ 63 GW ಸಾಮರ್ಥ್ಯದ ಸಾಮರ್ಥ್ಯವು ನಿರ್ಮಾಣ ಹಂತದಲ್ಲಿದೆ ಎಂದು ಸಚಿವರು ಹೇಳಿದ್ದಾರೆ.
ಮುಂದಿನ ಮೂರರಿಂದ ನಾಲ್ಕು ತಿಂಗಳಲ್ಲಿ ಭಾರತವು ಹಸಿರು ಹೈಡ್ರೋಜನ್ ಗಾಗಿ ಬಿಡ್ಗಳನ್ನು ಆಹ್ವಾನಿಸಲಿದೆ ಎಂದು ಸಿಂಗ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.