ಅಹ್ಮದಾಬಾದ್: ಆರ್ಥಿಕವಾಗಿ ಪ್ರಬಲವಾಗಿರುವ ಪಟೇಲ್ ಸಮುದಾಯ ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವುದು ಗುಜರಾತ್ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಅಹ್ಮದಾಬಾದ್ನಲ್ಲಿ ಈ ಸಮುದಾಯ ಮಂಗಳವಾರ ದೊಡ್ಡ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ಪ್ರತಿಭಟನೆಯ ರುವಾರಿ 21 ವರ್ಷದ ಹಾರ್ದಿಕ್ ಪಟೇಲ್ ಅಮರಣಾಂತ ಸತ್ಯಾಗ್ರಹವನ್ನು ನಡೆಸುತ್ತಿದ್ದಾರೆ.
’20 ಲಕ್ಷ ಪಟೇಲರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ನಮ್ಮ ಘನತೆ ಮತ್ತು ಪರಂಪರೆಯನ್ನು ಉಳಿಸಲು ನಮಗೆ ಮೀಸಲಾತಿ ಅಗತ್ಯವಾಗಿದೆ, ಮೀಸಲಾತಿಯ ಹಕ್ಕು ನಮಗೆ ಮತ್ತು ನಮ್ಮ ಮಕ್ಕಳಿಗಿದೆ’ ಎಂದು ಹಾರ್ದಿಕ್ ಹೇಳಿದ್ದಾರೆ.
ಪಟೇಲ್ ಯುವಕರು ಶಾಲೆಯಲ್ಲಿ ಪ್ರವೇಶಾತಿ ಪಡೆಯಲು ಪರದಾಡುವಂತಾಗಿದೆ, ಉದ್ಯೋಗವೂ ಇವರಿಗೆ ಸಿಗುತ್ತಿಲ್ಲ. ಹೀಗಾಗಿ ನಮಗೆ ಶೇ.27ರಷ್ಟು ಮೀಸಲಾತಿ ಬೇಕು, ನಮ್ಮ ಸಮುದಾಯವನ್ನು ಒಬಿಸಿ ಕೆಟಗಿರಿಗೆ ಸೇರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಅವರ ಈ ಪ್ರತಿಭಟನೆ ಗುಜರಾತ್ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ, ಈ ಸಮುದಾಯ ಬಿಜೆಪಿಯ ವೋಟ್ಬ್ಯಾಂಕ್ ಆಗಿದ್ದು, ಇವರ ವಿರುದ್ಧ ನಡೆದರೆ ಮುಳುವಾಗುವ ಆತಂಕವಿದೆ. ಹೀಗಾಗಿ ಸೂಕ್ಷ್ಮವಾಗಿ ವಿಷಯವನ್ನು ನಿರ್ವಹಿಸಲು ಮುಖ್ಯಮಂತ್ರಿ ಆನಂದಿ ಬೆನ್ ಪಟೇಲ್ ಮುಂದಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.