ನವದೆಹಲಿ: ಮೂರು ದಿನಗಳ ಯುರೋಪಿಯನ್ ಭೇಟಿಯಲ್ಲಿರುವ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಅವರು ಕಾರ್ಮಿಕ ಚಲನಶೀಲತೆಗೆ ಸಂಬಂಧಿಸಿದ ಪೋರ್ಚುಗಲ್ ಜೊತೆಗಿನ ಒಪ್ಪಂದ ಒಂದಕ್ಕೆ ಸಹಿ ಹಾಕಿದರು.
ಪೋರ್ಚುಗಲ್ನಲ್ಲಿ ಭಾರತೀಯರಿಗೆ ಉದ್ಯೋಗ ದೊರೆಯುವ ನಿಟ್ಟಿನಲ್ಲಿ ಈ ಒಪ್ಪಂದ ಅನುಕೂಲ ಒದಗಿಸಲಿದೆ. ಅಲ್ಲಿನ ವಿದೇಶಾಂಗ ವ್ಯವಹಾರಗಳು ಮತ್ತು ಸಹಕಾರ ರಾಜ್ಯ ಕಾರ್ಯದರ್ಶಿ ಫ್ರಾನ್ಸಿಸ್ಕೋ ಆಂಡ್ರೆ ಅವರೊಂದಿಗೆ ದ್ವಿಪಕ್ಷೀಯ ವಿಚಾರಗಳಿಗೆ ಸಂಬಂಧಿಸಿದಂತೆಯೂ ಗಹನ ಚರ್ಚೆ ನಡೆಸಿದರು. ಆ ಬಳಿಕ ಈ ಇಬ್ಬರು ಪ್ರಮುಖರು ಪೋರ್ಚುಗಲ್ನಲ್ಲಿ ಉದ್ಯೋಗಕ್ಕೆ ಭಾರತೀಯರ ನೇಮಕಕ್ಕೆ ಸಂಬಂಧಿಸಿದಂತೆ ಮುಖ್ಯವಾದ ಒಪ್ಪಂದವೊಂದಕ್ಕೆ ಸಹಿ ಹಾಕಿದರು.
ಭಾರತದ ಜೊತೆಗಿನ ಇಂತಹ ಒಪ್ಪಂದವೊಂದಕ್ಕೆ ಸಹಿ ಮಾಡಿದ ಮೊದಲ ಯುರೋಪಿಯನ್ ರಾಷ್ಟ್ರವಾಗಿದೆ ಪೋರ್ಚುಗಲ್. ಈ ಒಪ್ಪಂದ ಆ ದೇಶದಲ್ಲಿ ಭಾರತೀಯರಿಗೆ ಉದ್ಯೋಗದ ಸಾಧ್ಯತೆಗಳನ್ನು, ನೇಮಕಾತಿ ಪ್ರಕ್ರಿಯೆಗಳನ್ನು ಹೆಚ್ಚಿಸುತ್ತದೆ. ಇದರೊಂದಿಗೆ ಉಭಯ ದೇಶಗಳ ಆರ್ಥಿಕ, ಸಾಮಾಜಿಕ ಬಾಂಧವ್ಯ ವೃದ್ಧಿಗೂ ಇದು ಪೂರಕವಾಗಿರಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.