ನವದೆಹಲಿ: ಓಲಾ ಕಂಪನಿಯ ಮುಖ್ಯಸ್ಥ ಮತ್ತು ಗ್ರೂಪ್ ಸಿಇಒ ಭವಿಶ್ ಅಗರ್ವಾಲ್ ಸೋಮವಾರ ಕಂಪನಿಯ ತಮಿಳುನಾಡಿನ ಉತ್ಪಾದನಾ ಘಟಕವೋದ ಓಲಾ ಫ್ಯೂಚರ್ ಫ್ಯಾಕ್ಟರಿಯನ್ನು ಸಂಪೂರ್ಣವಾಗಿ ಮಹಿಳೆಯರೇ ನಡೆಸುತ್ತಾರೆ ಎಂದು ಘೋಷಿಸಿದ್ದಾರೆ
” ಓಲಾ ಫ್ಯೂಚರ್ ಫ್ಯಾಕ್ಟರಿ ವಿಶ್ವದ ಅತಿದೊಡ್ಡ ಮಹಿಳಾ ಕಾರ್ಖಾನೆ ಆಗಿರಲಿದೆ. ಆತ್ಮನಿರ್ಭರ ಭಾರತಕ್ಕೆ ಆತ್ಮನಿರ್ಭರ ಮಹಿಳೆಯರು ಬೇಕು!” ಎಂದು ಅವರು ಹೇಳಿದ್ದಾರೆ.
“ಇಂದು, ಓಲಾ ಫ್ಯೂಚರ್ ಫ್ಯಾಕ್ಟರಿಯನ್ನು ಸಂಪೂರ್ಣವಾಗಿ ಮಹಿಳೆಯರಿಂದ ನಡೆಸಲಾಗುವುದು ಎಂದು ಘೋಷಿಸಲು ನನಗೆ ಹೆಮ್ಮೆಯಾಗುತ್ತಿದೆ. ನಾವು ಈ ವಾರ ಮೊದಲ ಬ್ಯಾಚ್ ಅನ್ನು ಸ್ವಾಗತಿಸಿದ್ದೇವೆ ಮತ್ತು ಸಂಪೂರ್ಣ ಸಾಮರ್ಥ್ಯದಲ್ಲಿ, ಫ್ಯೂಚರ್ ಫ್ಯಾಕ್ಟರಿ 10,000 ಕ್ಕೂ ಹೆಚ್ಚು ಮಹಿಳೆಯರಿಗೆ ಉದ್ಯೋಗ ನೀಡುತ್ತದೆ. ಇದು ವಿಶ್ವದ ಅತಿದೊಡ್ಡ ಮಹಿಳೆಯರೇ ಇರುವ ಕಾರ್ಖಾನೆಯಾಗಲಾದೆ ಮತ್ತು ಜಾಗತಿಕವಾಗಿ ಏಕಮಾತ್ರ ಮಹಿಳಾ ವಾಹನ ತಯಾರಿಕಾ ಸೌಲಭ್ಯವಾಗಲಿದೆ” ಎಂದು ಭವಿಶ್ ಹೇಳಿದ್ದಾರೆ.
India’s women will bring the EV revolution from India to the world!
When women are equal participants in India’s economic growth, India will lead the world!#JoinTheRevolution pic.twitter.com/65LBJOcykM
— Bhavish Aggarwal (@bhash) September 13, 2021
ಓಲಾ ಫ್ಯೂಚರ್ ಫ್ಯಾಕ್ಟರಿ 500 ಎಕರೆಗಳಷ್ಟು ವ್ಯಾಪಿಸಿದೆ, ಉತ್ಪಾದನೆಯು ಪೂರ್ಣ ಸಾಮರ್ಥ್ಯವನ್ನು ತಲುಪಿದಾಗ 10,000 ಮಹಿಳೆಯರಿಗೆ ಉದ್ಯೋಗ ನೀಡುತ್ತದೆ. ಮೊದಲ ಹಂತದಲ್ಲಿ ಕಂಪನಿಯು 10 ಲಕ್ಷ ವಾರ್ಷಿಕ ಉತ್ಪಾದನಾ ಸಾಮರ್ಥ್ಯದೊಂದಿಗೆ ಆರಂಭವಾಗಲಿದೆ ಮತ್ತು ತರುವಾಯ ಮಾರುಕಟ್ಟೆಯ ಬೇಡಿಕೆಯ ಆಧಾರದ ಮೇಲೆ ಅದನ್ನು 20 ಲಕ್ಷ ಸಾಮರ್ಥ್ಯಕ್ಕೆ ಏರಿಸಲಾಗುತ್ತದೆ.
10,000 ಮಹಿಳೆಯರು ಜಾಗತಿಕ ಇವಿ ಕ್ರಾಂತಿಗೆ ಶಕ್ತಿ ತುಂಬುತ್ತಾರೆ ಎಂಬ ವಿಶ್ವಾಸವನ್ನು ಸಂಸ್ಥೆ ವ್ಯಕ್ತಪಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.