ನವದೆಹಲಿ: ದೇಶದ ಒಟ್ಟು ಆರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ಅರ್ಹ ಜನತೆಗೆ ಶೇ. 100ರಷ್ಟು ಮೊದಲ ಡೋಸ್ ಕೋವಿಡ್-19 ಲಸಿಕೆಯನ್ನು ನೀಡುವ ಮೂಲಕ ಮಹತ್ವದ ಸಾಧನೆಯನ್ನು ಮಾಡಿದೆ.
ದಾದರ್ ಮತ್ತು ನಗರ ಹವೇಲಿ, ದಮನ್ ಮತ್ತು ದಿಯು, ಗೋವಾ, ಹಿಮಾಚಲ ಪ್ರದೇಶ, ಲಡಾಖ್, ಲಕ್ಷದ್ವೀಪ ಮತ್ತು ಸಿಕ್ಕಿಂ ಈ ಸಾಧನೆಯನ್ನು ಮಾಡಿದ ರಾಜ್ಯಗಳಾಗಿವೆ.
ವಯಸ್ಕ ಜನಸಂಖ್ಯೆಯ ಶೇ. 100 ರಷ್ಟು ಜನರಿಗೆ ಹಿಮಾಚಲ ಪ್ರದೇಶವು ಮೊದಲ ಡೋಸ್ ಆಗಿ 55.74 ಲಕ್ಷ ಲಸಿಕೆ ಡೋಸ್ಗಳನ್ನು ನೀಡಿದೆ. ದಾದ್ರಾ ಮತ್ತು ನಗರ ಹವೇಲಿ, ದಮನ್ ಮತ್ತು ದಿಯು 6.26 ಲಕ್ಷ ಮೊದಲ ಲಸಿಕೆ ಡೋಸ್ಗಳನ್ನು ನೀಡಿದೆ. ಲಡಾಖ್ 1.97 ಲಕ್ಷ ಡೋಸ್ಗಳನ್ನು, ಲಕ್ಷದ್ವೀಪ 53,499 ಡೋಸ್ಗಳನ್ನು ಮತ್ತು ಸಿಕ್ಕಿಂ 5.10 ಲಕ್ಷ ಡೋಸ್ಗಳನ್ನು ಮೊದಲ ಡೋಸ್ ಆಗಿ ನೀಡಿದೆ.
ಕೇಂದ್ರ ಆರೋಗ್ಯ ಸಚಿವ ಮಾನ್ಸುಖ್ ಮಾಂಡವೀಯ ಈ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಅಭಿನಂದಿಸಿದ್ದಾರೆ ಮತ್ತು ಈ ಪ್ರದೇಶಗಳಲ್ಲಿನ ಆರೋಗ್ಯ ಕಾರ್ಯಕರ್ತರ ಶ್ರದ್ಧೆ ಮತ್ತು ಬದ್ಧತೆಯನ್ನು ಶ್ಲಾಘಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.