ನವದೆಹಲಿ: ಪಾಕಿಸ್ಥಾನದ ಗುಪ್ತಚರ ಸಂಸ್ಥೆ ಐಎಸ್ಐ ಮತ್ತು ಅಲ್ಲಿನ ಸೇನಾ ಬೆಂಬಲದೊಂದಿಗೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಒಟ್ಟು 17 ಉಗ್ರ ತರಬೇತಿ ಕೇಂದ್ರಗಳನ್ನು ನಡೆಸಲಾಗುತ್ತಿದೆ ಎಂಬ ಬಗ್ಗೆ ವರದಿಯಾಗಿದೆ.
ಅಲ್ಲದೇ ಇಲ್ಲಿ ತರಬೇತಿ ಪಡೆದಿರುವ 300 ಉಗ್ರರು ಭಾರತದೊಳಕ್ಕೆ ನುಸುಳಲು ಸಂಚು ರೂಪಿಸಿದ್ದಾರೆ. ಈ ಉಗ್ರರು ಲಷ್ಕರ್-ಇ-ತೋಯ್ಬಾ, ಜೈಶೇ-ಇ-ಮೊಹಮ್ಮದ್, ಹಿಜ್ಬುಲ್ ಮುಜಾಹಿದ್ದೀನ್ಗೆ ಸೇರಿದವರಾಗಿದ್ದಾರೆ ಎನ್ನಲಾಗಿದೆ.
ಸಲಹೆಗಾರರ ಮಟ್ಟದ ಸಭೆಯ ವೇಳೆ ಭಾರತ ಪಾಕ್ಗೆ ಹಸ್ತಾಂತರಿಸಲು ತಯಾರಿಸಿದ್ದ ದಾಖಲೆಯಲ್ಲಿ ಇದು ಕೂಡ ಸೇರಿತ್ತು. ಆದರೆ ಈ ಮಾತುಕತೆ ಮುರಿದು ಬಿದ್ದಿದೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಅಲ್ಲಿನ ಸೇನೆ ಮತ್ತು ಐಎಸ್ಐ ಬೆಂಬಲದೊಂದಿಗೆ ವಿವಿಧ ಉಗ್ರ ಸಂಘಟನೆಗಳು ಶಿಬಿರವನ್ನು ನಡೆಸುತ್ತಿವೆ ಎಂಬ ಬಗ್ಗೆ ಭಾರತದ ಗುಪ್ತಚರ ಇಲಾಖೆಗೆ ನಿಖರ ಮಾಹಿತಿಗಳು ಲಭ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.