ನವದೆಹಲಿ: ದೇಶೀಯ ಉತ್ಪಾದನೆ ಮತ್ತು ರಫ್ತು ಹೆಚ್ಚಿಸುವ ಉದ್ದೇಶದಿಂದ ಜವಳಿ ಕ್ಷೇತ್ರಕ್ಕೆ 10,683 ಕೋಟಿ ಮೌಲ್ಯದ ಉತ್ಪಾದನೆ ಸಂಬಂಧಿತ ಪ್ರೋತ್ಸಾಹಕ (ಪಿಎಲ್ಐ) ಯೋಜನೆಗೆ ಸಂಪುಟ ಬುಧವಾರ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
MMF (man made fiber), MMF ಫ್ಯಾಬ್ರಿಕ್ಸ್ ಮತ್ತು ತಾಂತ್ರಿಕ ಜವಳಿಯ ಹತ್ತು ಉತ್ಪನ್ನಗಳಿಗಾಗಿ 10,683 ಕೋಟಿ ರೂ.ಗಳ ಬಜೆಟ್ ವೆಚ್ಚದೊಂದಿಗೆ PLI ಯೋಜನೆಗೆ ಸಂಪುಟ ಅನುಮೋದನೆ ನೀಡಿದೆ.
ಆತ್ಮ ನಿರ್ಭರ ಭಾರತದ ದೂರದೃಷ್ಟಿಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳಲಾದ ಮಹತ್ವಪೂರ್ಣ ನಿರ್ಧಾರ ಇದಾಗಿದೆ.
2021-22ರ ಬಜೆಟ್ನಲ್ಲಿ ಘೋಷಿಸಲಾದ 1.97 ಲಕ್ಷ ಕೋಟಿ ರೂಪಾಯಿಯ 13 ವಲಯಗಳ ಪಿಎಲ್ಐ ಯೋಜನೆಗಳ ಭಾಗವಾಗಿ ಜವಳಿ ಕ್ಷೇತ್ರದಲ್ಲಿ PLI ಯೋಜನೆಯನ್ನು ಘೋಷಣೆ ಮಾಡಲಾಗಿದೆ. 13 ವಲಯಗಳ ಪಿಎಲ್ಐ ಯೋಜನೆಗಳ ಘೋಷಣೆಯಿಂದ ಭಾರತದಲ್ಲಿ ಕನಿಷ್ಠ ಉತ್ಪಾದನೆ ಐದು ವರ್ಷಗಳಲ್ಲಿ 37.5 ಲಕ್ಷ ಕೋಟಿ ರೂಪಾಯಿಗಳಿಗೆ ತಲುಪುವ ನಿರೀಕ್ಷೆಯಿದೆ. ಒಂದು ಕೋಟಿ ಉದ್ಯೋಗ ಸೃಷ್ಟಿ ಯಾವ ನಿರೀಕ್ಷೆಯಿದೆ.
ಜವಳಿಯಲ್ಲಿ ಪಿಎಲ್ಐ ಯೋಜನೆ ಹೆಚ್ಚಿನ ಮೌಲ್ಯದ ಎಂಎಂಎಸ್ ಫ್ಯಾಬ್ರಿಕ್ ಗಾರ್ಮೆಂಟ್ ಮತ್ತು ತಾಂತ್ರಿಕ ಜವಳಿಯನ್ನು ಭಾರತದಲ್ಲಿ ಉತ್ಪಾದಿಸಲು ಉತ್ತೇಜನ ನೀಡುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.