ನವದೆಹಲಿ: 2022ರಲ್ಲಿ ವಿಧಾನಸಭಾ ಚುನಾವಣೆಯನ್ನು ಎದುರಿಸಲಿರುವ ರಾಜ್ಯಗಳಲ್ಲಿ ಬಿಜೆಪಿಯು ತನ್ನ ಚುನಾವಣಾ ಉಸ್ತುವಾರಿಗಳನ್ನು ನಿಯೋಜಿಸಿದೆ.
ಪ್ರಮುಖವಾಗಿ ಉತ್ತರಪ್ರದೇಶದಲ್ಲಿ 2022 ರಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಹೀಗಾಗಿ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್ ಅವರನ್ನು ಅಲ್ಲಿನ ಚುನಾವಣಾ ಉಸ್ತುವಾರಿಯಾಗಿ ನೇಮಿಸಲಾಗಿದೆ. ಅನುರಾಗ್ ಸಿಂಗ್ ಠಾಕೂರ್, ಅರ್ಜುನ್ ರಾಮ್ ಮೇಘವಾಲ್, ಶೋಭಾ ಕರಂದ್ಲಾಜೆ ಮತ್ತು ಅನ್ನಪೂರ್ಣ ದೇವಿ, ಸಂಸದರಾದ ಸರೋಜ್ ಪಾಂಡೆ ಮತ್ತು ವಿವೇಕ್ ಠಾಕೂರ್ ಅವರನ್ನು ಅಲ್ಲಿನ ಸಹ ಉಸ್ತುವಾರಿಗಳನ್ನಾಗಿ ನಿಯೋಜನೆ ಮಾಡಲಾಗಿದೆ.
ಉತ್ತರಖಂಡದ ಬಿಜೆಪಿ ಉಸ್ತುವಾರಿ ಆಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ನೇಮಕ ಮಾಡಲಾಗಿದೆ. ಸಂಸದ ಲಾಕೆಟ್ ಚಟರ್ಜೀ ಅವರನ್ನು ಸಹ ಉಸ್ತುವಾರಿಯಾಗಿ ನೇಮಿಸಲಾಗಿದೆ.
ಪಂಜಾಬಿಗೆ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಉಸ್ತುವಾರಿ ಆಗಿ ನೇಮಿಸಲಾಗಿದೆ. ಸಹ ಉಸ್ತುವಾರಿ ಗಳಾಗಿ ಕೇಂದ್ರ ಸಚಿವರಾದ ಹಾರ್ದಿಕ್ ಸಿಂಗ್ ಪುರಿ ಮತ್ತು ಮೀನಾಕ್ಷಿ ಸಿಂಗ್ ಲೇಖಿ ಆಯ್ಕೆಯಾಗಿದ್ದಾರೆ.
ಮಣಿಪುರ ವಿಧಾನಸಭಾ ಚುನಾವಣೆಗೆ ಕೇಂದ್ರ ಸಚಿವ ಭೂಪೇಂದ್ರ ಯಾದವ್ ಅವರು ಉಸ್ತುವಾರಿಯಾಗಿ ಆಯ್ಕೆಯಾಗಿದ್ದಾರೆ.
ಅಸ್ಸಾಂಗೆ ಕೇಂದ್ರ ಸಚಿವೆ ಪ್ರತಿಮಾ ಭೌಮಿಕ್ ನೇಮಕವಾಗಿದ್ದಾರೆ ಮತ್ತು ಸಹ ಉಸ್ತುವಾರಿ ಗಳಾಗಿ ಅಸ್ಸಾಂ ಸಚಿವ ಅಶೋಕ್ ಸಿಂಘಲ್ ನೇಮಕವಾಗಿದ್ದಾರೆ.
ಉತ್ತರಪ್ರದೇಶ, ಉತ್ತರಾಖಂಡ, ಗೋವಾ, ಮಣಿಪುರ ಮತ್ತು ಪಂಜಾಬ್ ವಿಧಾನಸಭೆಗಳಿಗೆ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ.
भाजपा राष्ट्रीय अध्यक्ष श्री @JPNadda ने उत्तराखंड में होने वाले आगामी विधान सभा चुनाव के लिए चुनाव प्रभारी एवं सह-प्रभारियों की नियुक्ति की। pic.twitter.com/ALxs11NdQx
— BJP (@BJP4India) September 8, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.