ನವದೆಹಲಿ: ಪ್ರಪಂಚದಾದ್ಯಂತದ ಹಿಂದೂ, ಸಿಖ್, ಬೌದ್ಧ ಮತ್ತು ಜೈನ ಸಂಪ್ರದಾಯ ಆಧಾರಿತ ಸಂಸ್ಥೆಗಳು ಅಕ್ಟೋಬರ್ ಅನ್ನು ಹಿಂದೂ ಪರಂಪರೆಯ ತಿಂಗಳಾಗಿ ಆಚರಿಸಲಾಗುವುದು ಎಂದು ಘೋಷಿಸಿವೆ.
ಹಿಂದೂ ತತ್ವಗಳು ಎಷ್ಟು ಮುಕ್ತ ಮತ್ತು ಸ್ವತಂತ್ರವಾಗಿವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಜಗತ್ತಿಗೆ ಇದು ಅವಕಾಶವನ್ನು ನೀಡಲಿದೆ.
ಹಿಂದೂ ಪರಂಪರೆಯನ್ನು ‘ರಿಲಿಜನ್’ ಎಂಬ ಟ್ಯಾಗ್ನಿಂದ ತಪ್ಪಾಗಿ ಚಿತ್ರಿಸಲಾಗುತ್ತಿದ್ದು, ಇದನ್ನು ತೊಡೆದು ಹಾಕಲು ಅಮೆರಿಕದ ವಿಶ್ವ ಹಿಂದೂ ಕೌನ್ಸಿಲ್ ಅಕ್ಟೋಬರ್ ತಿಂಗಳನ್ನು ಹಿಂದೂ ಪರಂಪರೆಯ ತಿಂಗಳಾಗಿ ಆಚರಿಸಲು ನಿರ್ಧರಿಸಿದೆ.
ಹಿಂದೂಗಳು ಅಮೆರಿಕ ಮತ್ತು ಕೆನಡಾದಲ್ಲಿ ಹೊಸ ಮತ್ತು ವೇಗವಾಗಿ ಬೆಳೆಯುತ್ತಿರುವ ವಲಸೆ ಸಮುದಾಯಗಳಲ್ಲಿ ಒಂದಾಗಿದೆ. ಕುಟುಂಬ ರಚನೆ ಮತ್ತು ಶಿಕ್ಷಣದ ಮೇಲಿನ ಪ್ರೀತಿ ಹೊಂದಿರುವ ಈ ಸಮುದಾಯ ತಾವು ನೆಲೆನಿಂತ ಸಮಾಜದ ಪ್ರತಿಯೊಂದು ಅಂಶಗಳೊಂದಿಗೆ ಸಂಪೂರ್ಣವಾಗಿ ಸಂಯೋಜಿಸಲ್ಪಟ್ಟಿದ್ದಾರೆ. ಅತ್ಯುತ್ತಮ ವೃತ್ತಿಪರ ಕೊಡುಗೆಗಳನ್ನು ಮಾತ್ರವಲ್ಲದೆ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನೂ ಸಮೃದ್ಧಗೊಳಿಸುತ್ತಿದ್ದಾರೆ.
‘ಮುಕ್ತ ಮೂಲ’ ಮಾದರಿಯನ್ನು ಆಧರಿಸಿ, ಹಿಂದೂ ಪರಂಪರೆ ತಿಂಗಳ ಆಚರಣೆಯು ಹಿಂದೂ ನಾಗರೀಕತೆಯ ಮೂಲಭೂತವಾದ ವೈವಿಧ್ಯತೆಯನ್ನು ಪ್ರದರ್ಶಿಸುತ್ತದೆ. ಕೆನಡಾ, ಅಮೆರಿಕಾದ ಹಲವಾರು ಕಡೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಫ್ಯಾಶನ್ ಶೋಗಳು, ವೆಬಿನಾರ್ಗಳು, ಸಮ್ಮೇಳನಗಳು, ವಾಕಥಾನ್ಗಳು ಮತ್ತು ಇನ್ನಷ್ಟು ಕಾರ್ಯಕ್ರಮಗಳು ಜರುಗಲಿವೆ. ಹೆಚ್ಚಿನ ಕಾರ್ಯಕ್ರಮಗಳು ವರ್ಚುವಲ್ ಆಗಿರಲಿದೆ.
ಹಿಂದೂ ಧರ್ಮದಲ್ಲಿನ ಸನಾತನ ಮೌಲ್ಯಗಳನ್ನು ಗುರುತಿಸುವ ಎಲ್ಲಾ ಸಂಸ್ಥೆಗಳು, ವ್ಯವಹಾರಗಳು ಮತ್ತು ವ್ಯಕ್ತಿಗಳ ಭಾಗವಹಿಸುವಿಕೆ ಮುಕ್ತವಾಗಿದೆ. ವರದಿಗಳ ಪ್ರಕಾರ ಈ ಆಚರಣೆಯಲ್ಲಿ 30 ಕ್ಕೂ ಹೆಚ್ಚು ಸಂಸ್ಥೆಗಳು ಈಗಾಗಲೇ ಕೈಜೋಡಿಸಿವೆ. ಮುಂದಿನ ದಿನಗಳಲ್ಲಿ ಇನ್ನೂ ಅನೇಕರು ಸೇರುವ ನಿರೀಕ್ಷೆಯಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.