ನವದೆಹಲಿ: ಜಾಗತಿಕ ನಾಯಕ ಮಾನ್ಯತೆಯ ಶ್ರೇಯಾಂಕದಲ್ಲಿ ಭಾರತದ ಪ್ರಧಾನಿ ಮೋದಿ ಅವರು ಮೊದಲನೇಯ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್, ಬೋರಿಸ್ ಜಾನ್ಸನ್, ಅಯಂಜೆಲಾ ಮರ್ಕೆಲ್, ಜಸ್ಟಿನ್ ಟ್ರುಡೊ ಮೊದಲಾದವರನ್ನು ಮೀರಿಸಿ ಭಾರತದ ಪ್ರಧಾನಿ ನಂಬರ್ ಒನ್ ಸ್ಥಾನವನ್ನು ಅಲಂಕರಿಸಿದ್ದಾರೆ.
ಈ ಸರ್ವೇಯನ್ನು ಅಮೆರಿಕದ ಡೇಟಾ ಇಂಟೆಲಿಜೆನ್ಸ್ ಸಂಸ್ಥೆ ದ ಮಾರ್ನಿಂಗ್ ಕನ್ಸಲ್ಟ್ ನಡೆಸಿದ್ದು, ಇದರಲ್ಲಿ ಮೋದಿ ಅವರು ಜಾಗತಿಕ ನಾಯಕರ ಮಾನ್ಯತೆಯ ಶ್ರೇಯಾಂಕದಲ್ಲಿ ನಂ. 1 ಪಟ್ಟದಲ್ಲಿರುವುದಾಗಿ ತಿಳಿಸಿದೆ. ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಈ ಸರ್ವೇಯನ್ನು ನಡೆಸಲಾಗಿದ್ದು, ಆಯಾ ದೇಶಗಳಲ್ಲಿನ ವಯಸ್ಕರಿಂದ ಸುಮಾರು ಏಳು ದಿನಗಳ ಕಾಲ ಸಂಗ್ರಹಿಸಿದ ಅಂಕಿ ಅಂಶಗಳನ್ನು ಆಧರಿಸಿ ಸಂಸ್ಥೆ ಈ ಫಲಿತಾಂಶ ಪ್ರಕಟಿಸಿದೆ.
ಮೋದಿ ಅವರು 70% ರೇಟಿಂಗ್ ಗಳಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದರೆ, ಮೆಕ್ಸಿಕೊ ಅಧ್ಯಕ್ಷ ಆಯಂಡ್ರಸ್ ಮಾನುವೆಲ್ ಲೊಪೆಜ್ ಒಬ್ರಡಾರ್ ಅವರು 64% ರೇಟಿಂಗ್ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.