ಟೊಕಿಯೋ: ಜಪಾನ್ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೆರಡು ಪದಕಗಳು ಲಭಿಸಿವೆ.
ಶೂಟಿಂಗ್ ಸ್ಪರ್ಧೆಯಲ್ಲಿ ಭಾರತೀಯ ಕ್ರೀಡಾಪಟು ಮನೀಶ್ ನರ್ವಾಲ್ ಅವರು ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದು, ಸಿಂಗ್ರಾಜ್ ಅಧಾನಾ ಅವರು ಬೆಳ್ಳಿ ಪದಕವನ್ನು ಗಳಿಸುವ ಮೂಲಕ ದೇಶಕ್ಕೆ ಮತ್ತಷ್ಟು ಕೀರ್ತಿಯನ್ನು ತಂದುಕೊಟ್ಟಿದ್ದಾರೆ.
ಇಂದು ನಡೆದ ಪಿ4 ಮಿಕ್ಸ್ಡ್ 50 ಮೀ. ಪಿಸ್ತೂಲ್ ವಿಭಾಗದಲ್ಲಿ ಭಾರತದ ಇಬ್ಬರು ತಾರೆಯರು ಭರ್ಜರಿ ಗೆಲುವು ಸಾಧಿಸುವ ಮೂಲಕ ಚಿನ್ನ ಮತ್ತು ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಆ ಮೂಲಕ ಈ ವರೆಗೆ ಭಾರತಕ್ಕೆ 3 ಚಿನ್ನ, 7 ಬೆಳ್ಳಿ ಮತ್ತು 5 ಕಂಚು ಸೇರಿ ಒಟ್ಟು 15 ಪದಕಗಳು ದೊರೆತಿವೆ.
ಇನ್ನು ಮನೀಶ್ ಮತ್ತು ಸಿಂಗ್ರಾಜ್ ಸಾಧನೆಗೆ ಪ್ರಧಾನಿ ಮೋದಿ ಅವರು ಟ್ವೀಟರ್ ಮೂಲಕ ಅಭಿನಂದನೆಗಳನ್ನು ಸಲ್ಲಿಸಿದ್ದು, ಟೊಕಿಯೋ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತದ ವೈಭವ ರಾರಾಜಿಸುವುದು ಮುಂದುವರಿದಿದೆ. ಪ್ರತಿಭಾನ್ವಿತ ಯುವ ಆಟಗಾರ ಮನೀಶ್ ನರ್ವಾಲ್ ಅವರಿಂದ ಉತ್ತಮ ಪ್ರದರ್ಶನ. ಅವರು ಚಿನ್ನದ ಪದಕ ಗೆದ್ದಿರುವುದು ಒಂದು ವಿಶೇಷ ಕ್ಷಣವಾಗಿದೆ. ಅವರಿಗೆ ಅಭಿನಂದನೆಗಳು. ಅವರ ಭವಿಷ್ಯಕ್ಕೆ ಶುಭಹಾರೈಕೆಗಳು ಎಂದು ತಿಳಿಸಿದ್ದಾರೆ.
ಹಾಗೆಯೇ ಸಿಂಗ್ರಾಜ್ ಅವರಿಂದ ಮತ್ತೊಮ್ಮೆ ಅದ್ಭುತ ಪ್ರದರ್ಶನ. ಅವರು ಪ್ಯಾರಾಲಿಂಪಿಕ್ಸ್ನಲ್ಲಿ ಇದೀಗ ಮತ್ತೊಂದು ಪದಕವನ್ನು ಶೂಟಿಂಗ್ನಲ್ಲಿ ತಮ್ಮದಾಗಿಸಿಕೊಂಡಿದ್ದಾರೆ. ಅವರಿಗೆ ಅಭಿನಂದನೆಗಳು. ಅವರ ಸಾಧನೆಗೆ ಭಾರತ ಹೆಮ್ಮೆಪಡುತ್ತದೆ. ಅವರ ಭವಿಷ್ಯಕ್ಕೆ ಶುಭಹಾರೈಕೆಗಳು ಎಂದು ತಿಳಿಸಿದ್ದಾರೆ.
Glory from the Tokyo #Paralympics continues. Great accomplishment by the young and stupendously talented Manish Narwal. His winning the Gold Medal is a special moment for Indian sports. Congratulations to him. Best wishes for the coming times. #Praise4Para. pic.twitter.com/gGHUXnetWA
— Narendra Modi (@narendramodi) September 4, 2021
The outstanding Singhraj Adhana does it again! He wins yet another medal, this time in the Mixed 50m Pistol SH1 event. India rejoices due to his feat. Congrats to him. Wishing him the very best for the future endeavours. #Paralympics #Praise4Para. pic.twitter.com/EWa9gCRaor
— Narendra Modi (@narendramodi) September 4, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.