ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವ್ಲಾಡಿವೋಸ್ಟಾಕ್ನಲ್ಲಿ 2021ರ ಸೆಪ್ಟೆಂಬರ್ 3ರಂದು ನಡೆದ 6ನೇ ʻಪೂರ್ವ ಆರ್ಥಿಕ ವೇದಿಕೆʼಯ (ಇಇಎಫ್) ಸರ್ವಸದಸ್ಯರ ಸಭೆಯನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು. 2019ರಲ್ಲಿ 5ನೇ ʻಇಇಎಫ್ʼಗೆ ಪ್ರಧಾನ ಮಂತ್ರಿ ಮೋದಿ ಅವರು ಮುಖ್ಯ ಅತಿಥಿಯಾಗಿದ್ದರು ಮತ್ತು ಇಂತಹ ಅವಕಾಶ ಪಡೆದ ಭಾರತದ ಮೊದಲ ಪ್ರಧಾನಿ ಅವರಾಗಿದ್ದಾರೆ ಎಂಬುದನ್ನು ಇಲ್ಲಿ ಸ್ಮರಿಸಬಹುದು.
ರಷ್ಯಾದ ದೂರ ಪ್ರಾಚ್ಯದ ಅಭಿವೃದ್ಧಿಗಾಗಿ ಅಧ್ಯಕ್ಷ ಪುಟಿನ್ ಅವರ ದೃಷ್ಟಿಕೋನವನ್ನು ಪ್ರಧಾನಿ ಶ್ಲಾಘಿಸಿದರು. ಈ ನಿಟ್ಟಿನಲ್ಲಿ ಭಾರತ ತನ್ನ “ಆಕ್ಟ್ ಈಸ್ಟ್ ಪಾಲಿಸಿʼʼಯ ಭಾಗವಾಗಿ ರಷ್ಯಾದ ವಿಶ್ವಾಸಾರ್ಹ ಪಾಲುದಾರನಾಗಿ ಉಳಿಯುವ ಬದ್ಧತೆಯನ್ನು ಪುನರುಚ್ಚರಿಸಿದರು. ರಷ್ಯಾದ ದೂರಪ್ರಾಚ್ಯದ ಅಭಿವೃದ್ಧಿಯಲ್ಲಿ ಭಾರತ ಮತ್ತು ರಷ್ಯಾದ ನೈಸರ್ಗಿಕ ಪೂರಕತೆಗಳನ್ನು ಅವರು ಒತ್ತಿ ಹೇಳಿದರು.
‘ವಿಶೇಷ ಮತ್ತು ಆದ್ಯತೆಯ ವ್ಯೂಹಾತ್ಮಕ ಪಾಲುದಾರಿಕೆ’ಗೆ ಅನುಗುಣವಾಗಿ ಎರಡೂ ದೇಶಗಳ ನಡುವೆ ಹೆಚ್ಚಿನ ಆರ್ಥಿಕ ಮತ್ತು ವಾಣಿಜ್ಯ ಒಪ್ಪಂದಗಳ ಮಹತ್ವವನ್ನು ಪ್ರಧಾನಿ ಒತ್ತಿ ಹೇಳಿದರು. ಸಾಂಕ್ರಾಮಿಕದ ಸಮಯದಲ್ಲಿ ಸಹಕಾರದ ಪ್ರಮುಖ ಕ್ಷೇತ್ರಗಳಾಗಿ ಹೊರಹೊಮ್ಮಿರುವ ಆರೋಗ್ಯ ಮತ್ತು ಔಷಧ ವಲಯಗಳ ಮಹತ್ವವನ್ನು ಅವರು ಒತ್ತಿ ಹೇಳಿದರು. ವಜ್ರ, ಕೋಕಿಂಗ್ ಕಲ್ಲಿದ್ದಲು, ಉಕ್ಕು, ಮರಮಟ್ಟು ಸೇರಿದಂತೆ ಆರ್ಥಿಕ ಸಹಕಾರದ ಇತರ ಸಂಭಾವ್ಯ ಕ್ಷೇತ್ರಗಳನ್ನು ಅವರು ಉಲ್ಲೇಖಿಸಿದರು. ʻಇಇಎಫ್-2019ʼಕ್ಕೆ ಭಾರತೀಯ ರಾಜ್ಯಗಳ ಮುಖ್ಯಮಂತ್ರಿಗಳು ಭೇಟಿ ನೀಡಿದ್ದನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ರಷ್ಯಾದ ದೂರ ಪ್ರಾಚ್ಯದ 11 ಪ್ರದೇಶಗಳ ರಾಜ್ಯಪಾಲರಿಗೆ ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.