ಸಿಕಂದರಾಬಾದ್: ಪ್ರಾಚೀನ ಭಾರತೀಯ ಗ್ರಂಥಗಳಾದ ಕೌಟಿಲ್ಯನ ಅರ್ಥಶಾಸ್ತ್ರ, ತಿರುಕ್ಕುರುಳ್, ಭಗವದ್ಗೀತೆಗಳನ್ನು ರಕ್ಷಣಾ ಅಧಿಕಾರಿಗಳ ತರಬೇತಿಇ ನೀಡಲು ಭಾರತೀಯ ಮಿಲಿಟರಿ ಪಠ್ಯಕ್ರಮದಲ್ಲಿ ಸೇರಿಸುವಂತೆ ಸಿಕಂದರಾಬಾದ್ನ ಕಾಲೇಜ್ ಆಫ್ ಡಿಫೆನ್ಸ್ ಮ್ಯಾನೇಜ್ಮೆಂಟ್ ಶಿಫಾರಸು ಮಾಡಿದೆ.
ಈ ಬಗ್ಗೆ ಖಾಸಗಿ ಮಾಧ್ಯಮವೊಂದು ವರದಿ ಮಾಡಿದ್ದು, ಭಾರತೀಯ ಸಂಸ್ಕೃತಿ ಅಧ್ಯಯನಕ್ಕೆ ಇದು ವೇದಿಕೆಯಾಗುತ್ತದೆ ಎಂದು ತಿಳಿಸಿದೆ. ಅಲ್ಲದೆ, 2014 ರ ಬಳಿಕ ಪ್ರಧಾನಿ ಮೋದಿ ಅವರು ಅಧಿಕಾರ ವಹಿಸಿಕೊಂಡ ಬಳಿಕ ಸೇನೆ ಸೇರಿದಂತೆ ಭಾರತದ ಹೆಚ್ಚಿನ ವಸ್ತು ವಿಷಯಗಳಲ್ಲಿ ಭಾರತೀಯೀಕರಣಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಲಾಗಿದೆ ಎಂದು ತಿಳಿಸಿದೆ.
ಸೇನಾ ಉಪಕರಣಗಳು, ಶಸ್ತ್ರಾಸ್ತ್ರಗಳು ಸೇರಿದಂತೆ ಭಾರತೀಯ ರಕ್ಷಣಾ ವಲಯದಲ್ಲಿಯೂ ಭಾರತೀಯತೆಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗಿದೆ. ಕೌಟಿಲ್ಯನ ಅರ್ಥಶಾಸ್ತ್ರ, ಭಗವದ್ಗೀತೆಯಲ್ಲಿ ಹೇಳಿರುವ ಯುದ್ಧತಂತ್ರಗಳು ಪ್ರಸ್ತುತ ಸನ್ನಿವೇಶಗಳಿಗೂ ಹೆಚ್ಚು ಸೂಕ್ತವಾಗಿದ್ದು, ಈ ನಿಟ್ಟಿನಲ್ಲಿ ರಕ್ಷಣಾ ತರಬೇತಿಗೆ ಸಂಬಂಧಿಸಿದಂತೆ ಇಂತಹ ಪೌರಾಣಿಕ ಗ್ರಂಥಗಳನ್ನು ಪಠ್ಯಕ್ರಮಗಳನ್ನಾಗಿ ಬೋಧಿಸುವುದು ಸೂಕ್ತ ಎಂದು ತನ್ನ ಶಿಫಾರಸ್ಸಿನಲ್ಲಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.