ಬೆಂಗಳೂರು: ರಾಜ್ಯದಲ್ಲಿ ದಾಖಲೆಯ 48.25 ಲಕ್ಷ ಕೊರೋನಾ ಟೆಸ್ಟ್ ನಡೆಸುವ ಮೂಲಕ, ಅತೀ ಹೆಚ್ಚು ಕೊರೋನಾ ಪರೀಕ್ಷೆ ನಡೆಸಿದ ತಿಂಗಳು ಎಂಬ ಹೆಗ್ಗಳಿಕೆಗೆ ಆಗಸ್ಟ್ ತಿಂಗಳು ಪಾತ್ರವಾಗಿದೆ.
ಕೊರೋನಾ ಎರಡನೇ ಅಲೆಯ ಸಂದರ್ಭದಲ್ಲಿ ದಾಖಲೆಯ ಪ್ರಮಾಣದಲ್ಲಿ ರಾಜ್ಯದಲ್ಲಿ ಲಸಿಕೆ ನೀಡಲಾಗಿದ್ದು, ಇದೀಗ ಒಂದೇ ತಿಂಗಳಲ್ಲಿ 48.25 ಲಕ್ಷ ಜನರಿಗೆ ಕೊರೋನಾ ಪರೀಕ್ಷೆ ನಡೆಸುವ ಮೂಲಕ ಮತ್ತೊಂದು ಸಾಧನೆಯನ್ನು ಕರ್ನಾಟಕ ಮೆರೆದಿದೆ. ಕೊರೋನಾ ಮೊದಲನೇ ಅಲೆಯ ಸಂದರ್ಭದಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾದಂತೆ ಸರ್ಕಾರ ಪರೀಕ್ಷೆ ನಡೆಸುವ ಪ್ರಮಾಣ ತಗ್ಗಿಸಿತ್ತು. ಆದರೆ ಎರಡನೇ ಅಲೆಯ ಸಂದರ್ಭದಲ್ಲಿ ಮತ್ತೆ ಹೆಚ್ಚು ಪರೀಕ್ಷೆಗಳನ್ನು ನಡೆಸಲು ಅಗತ್ಯ ಕ್ರಮ ಕೈಗೊಂಡಿರುವ ಸರ್ಕಾರ ಆಗಸ್ಟ್ನಲ್ಲಿ 48.25 ಲಕ್ಷ ಕೊರೋನಾ ಪರೀಕ್ಷೆ ನಡೆಸುವ ಮೂಲಕ ಈ ಹಿಂದಿನ ತನ್ನ ಎಲ್ಲಾ ದಾಖಲೆಗಳನ್ನು ಮೀರಿ ಸಾಧನೆ ಮೆರೆದಿದೆ.
ಹಾಗೆಯೇ ರಾಜ್ಯದಲ್ಲಿ ಕೊರೋನಾ ಮೂರನೇ ಅಲೆಯ ಸಂಭವನೀಯತೆಯೂ ಇದ್ದು, ಕೊರೋನಾ ಪ್ರಕರಣಗಳಲ್ಲಿ ಇಳಿಕೆಯಾಗಿದ್ದರೂ, ಪರೀಕ್ಷಾ ಪ್ರಮಾಣವನ್ನು ಮಾತ್ರ ಸರ್ಕಾರ ಹೆಚ್ಚಿಸಿದೆ. ಆ ಮೂಲಕ ಮೂರನೇ ಅಲೆ ತಡೆಯುವ ನಿಟ್ಟಿನಲ್ಲಿಯೂ ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಹಾಗೆಯೇ ಸೋಂಕು ಹೆಚ್ಚುವ ಸಾಧ್ಯತೆಗಳಿರುವ ಮಾರುಕಟ್ಟೆ, ಬಸ್, ರೈಲು ನಿಲ್ದಾಣ ಸೇರಿದಂತೆ ಜನಜಂಗುಳಿ ಸೇರುವ ಪ್ರದೇಶಗಳಲ್ಲಿಯೂ ಸೋಂಕು ಹರಡದಂತೆ ಎಚ್ಚರಿಕೆ ವಹಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.