ನವದೆಹಲಿ: ಪ್ರಸ್ತುತ ಅಫ್ಘಾನಿಸ್ಥಾನದಿಂದ ಭಾರತದತ್ತ ಮುಖ ಮಾಡಿರುವ ಅಲ್ಲಿನ ನಾಗರಿಕರಿಗೆ ಕೇವಲ ಆರು ತಿಂಗಳ ವರೆಗೆ ಮಾತ್ರವೇ ವೀಸಾ ಸೌಲಭ್ಯ ಒದಗಿಸಲಾಗುವುದು. ಆ ಬಳಿಕ ಅದನ್ನು ಹಿಂಪಡೆಯಲಾಗುವುದು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಸದ್ಯದ ಸ್ಥಿತಿಯಲ್ಲಿ ವಿಸಾ ಸೌಲಭ್ಯಗಳನ್ನು ಹೆಚ್ಚು ದೀರ್ಘಾವಧಿಯ ವರೆಗೆ ವಿಸ್ತರಣೆ ಮಾಡುವುದು ಸರಿಯಲ್ಲ. ಪ್ರಸ್ತುತ ತಾಲೀಬಾನ್ ಉಗ್ರರ ಹಿಡಿತದಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಅಫ್ಘಾನ್ನ ನಾಗರಿಕರು ಬೇರೆ ದೇಶಗಳತ್ತ ಪಲಾಯನ ಮಾಡುತ್ತಿದ್ದಾರೆ. ಇ ವಿಸಾ ಬಳಸಿ ಭಾರತಕ್ಕೂ ಬರುತ್ತಿದ್ದಾರೆ. ವಿಸಾ ಅವಧಿಯನ್ನು ಆರು ತಿಂಗಳ ಬಳಿಕ ಹಿಂಪಡೆಯಲಾಗುವುದು. ಯೋಜನೆಯ ದೀರ್ಘಾವಧಿಯ ವಿಸ್ತರಣೆ ಸರಿಯಾದ ಆಲೋಚನೆಯಾಗುವುದಿಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ.
ಅಫ್ಘಾನಿಸ್ಥಾನದ ಪ್ರಸ್ತುತ ಪರಿಸ್ಥಿತಿ ಅವಲೋಕಿಸಿ ಇ ಎಮರ್ಜೆನ್ಸಿ ವಿಸಾವನ್ನು ನೀಡಲಾಗುತ್ತಿದೆ. ಈಗಾಗಲೇ 1000 ಕ್ಕೂ ಅಧಿಕ ವಿಸಾಗಳ ಕಳ್ಳತನದ ವಿಚಾರಗಳು ಸಹ ಬೆಳಕಿಗೆ ಬಂದಿದೆ. ಈ ನಿಟ್ಟಿನಲ್ಲಿ ಯಾವುದೇ ಸಮಸ್ಯೆಗೆ ಆಸ್ಪದ ನೀಡಬಾರದು ಎಂಬ ಉದ್ದೇಶದಿಂದ ಆರು ತಿಂಗಳಿಗೆ ಮಾತ್ರ ಇ ವಿಸಾ ಸೌಲಭ್ಯ ಒದಗಿಸುತ್ತಿರುವುದಾಗಿ ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.