ಬೆಂಗಳೂರು: ದೇಶದ ಪ್ರಖ್ಯಾತ ಇ – ಕಾಮರ್ಸ್ ಫ್ಲಿಪ್ಕಾರ್ಟ್ ಮುಂಬರುವ ಹಬ್ಬಗಳ ಸಂದರ್ಭದಲ್ಲಿ ರಾಜ್ಯದಲ್ಲಿ ಇನ್ನೂ ಮೂರು ಕೇಂದ್ರಗಳನ್ನು ಆರಂಭಿಸುವ ಮೂಲಕ ತನ್ನ ಸೇವೆಯನ್ನು ವಿಸ್ತರಿಸಲು ಮುಂದಾಗಿದೆ.
ಸಂಸ್ಥೆಯ ಈ ನಿರ್ಧಾರದಿಂದ ರಾಜ್ಯದಲ್ಲಿನ ಸಾವಿರಾರು ಮಾರಾಟಗಾರರು, ಎಂಎಸ್ಎಂಇ, ಸಣ್ಣ ರೈತರಿಗೆ ಅನುಕೂಲವಾಗಲಿದೆ. ಜೊತೆಗೆ ಏರುತ್ತಿರುವ ಗ್ರಾಹಕರ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿಯೂ ಸಂಸ್ಥೆಯ ಈ ನಿರ್ಣಯ ಮಹತ್ವ ಪಡೆಯಲಿದೆ. ರಾಜ್ಯದ ಗ್ರಾಹಕರಿಗೆ ಉತ್ಪನ್ನಗಳನ್ನು ತ್ವರಿತವಾಗಿ ತಲುಪಿಸುವ ನಿಟ್ಟಿನಲ್ಲಿಯೂ ಈ ಕ್ರಮ ಪೂರಕವಾಗಿರಲಿದೆ. ಜೊತೆಗೆ ಸುಮಾರು 14 ಸಾವಿರಗಳಷ್ಟು ನೇರ, ಪರೋಕ್ಷ ಉದ್ಯೋಗಾವಕಾಶಗಳೂ ಸೃಷ್ಟಿಯಾಗಲಿವೆ.
ಈ ಫುಲ್ಫಿಲ್ಮೆಂಟ್ಗಳು ಸಂಸ್ಥೆಯ ವಿಶೇಷ ಸೌಲಭ್ಯಗಳಾಗಿದ್ದು, ಇದು ರಾಜ್ಯಾದ್ಯಂತ ಮಾರಾಟಗಾರರಿಂದ ಉತ್ಪನ್ನಗಳ ಖರೀದಿ, ಸಂಗ್ರಹ, ಪ್ಯಾಕಿಂಗ್ ಮಾಡಲಿದೆ. ಜೊತೆಗೆ ಗ್ರಾಹಕರಿಗೆ ಈ ಉತ್ಪನ್ನಗಳನ್ನು ತಲುಪಿಸುವ ನಿಟ್ಟಿನಲ್ಲಿ ವಿಂಗಡಣಾ ಕೇಂದ್ರಗಳು, ವಿತರಣಾ ಕೇಂದ್ರಗಳಿಗೆ ರವಾನಿಸಲಿದೆ. ಇದು 10,500 ಕ್ಕೂ ಅಧಿಕ ಮಾರಾಟಗಾರರಿಗೆ ನೆರವಾಗಲಿದೆ. ರಾಜ್ಯದ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವ ದೃಷ್ಟಿಯಿಂದಲೂ ಇದು ಪರಿಹಾರ ಬೀರಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.