ನವದೆಹಲಿ: ಕೇಂದ್ರ ಸರ್ಕಾರವು ದೇಶದಲ್ಲಿ ಡ್ರೋಣ್ಗಳ ಬಳಕೆಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಹೊರಡಿಸಿದೆ.
ಇದರಲ್ಲಿ ಈ ಹಿಂದಿನ ನಿಯಮಗಳಿಗೆ ಕೆಲವು ಸಡಿಲಿಕೆಗಳನ್ನು ಮಾಡಲಾಗಿದೆ. ಈ ನಿಯಮದ ಪ್ರಕಾರ ಡ್ರೋಣ್ಗಳ ನೋಂದಣಿ, ಕಾರ್ಯಾಚರಣೆಗೆ ಪರವಾನಗಿ ನೀಡುವ ಮೊದಲು ಯಾವುದೇ ಭದ್ರತಾ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ತಿಳಿಸಿದೆ. ಹಾಗೆಯೇ ಡ್ರೋಣ್ಗಳ ನಿರ್ವಹಣಾ ಅನುಮತಿಯ ಶುಲ್ಕಕ್ಕೆ ಸಂಬಂಧಿಸಿದಂತೆಯೂ ಕೆಲವು ಮಾರ್ಪಾಡುಗಳನ್ನು ಮಾಡಲಾಗಿದೆ.
ಸರಕು ಸಾಗಾಟದ ಡ್ರೋಣ್ ಗಳಿಗೆ ಸಂಬಂಧಿಸಿದಂತೆ 300 ಕೆಜಿ ಗಳಿಂದ 500 ಕೆಜಿಗಳಿಗೆ ಮಿತಿಯನ್ನು ಏರಿಸಲಾಗಿದೆ. ಕಾನೂನು ಉಲ್ಲಂಘನೆ ಹೊರತಾಗಿ, ಉಳಿದಂತೆ ದಂಡದ ಗರಿಷ್ಠ ಮಿತಿಯನ್ನು 1 ಲಕ್ಷ ರೂ. ಗಳ ವರೆಗೆ ಡ್ರೋಣ್ಗಳಿಗೆ ಹೇರುವುದಕ್ಕೂ ಈ ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ವಿಮಾನ ನಿಲ್ದಾಣಗಳಲ್ಲಿ ಡ್ರೋಣ್ ಬಳಕೆಗೆ ಸಂಬಂಧಿಸಿದಂತೆಯೂ ಇದರಲ್ಲಿ ಉಲ್ಲೇಖಿಸಲಾಗಿದೆ. ಎಲ್ಲಾ ಡ್ರೋಣ್ಗಳ ಪರೀಕ್ಷೆಯನ್ನು, ತರಬೇತಿಗಳನ್ನು ಅಧಿಕೃತ ಡ್ರೋಣ್ ಶಾಲೆಗಳಿಂದಲೇ ನಡೆಸಲಾಗುವುದು ಎಂದು ಈ ನಿಯಮದಲ್ಲಿ ಕೇಂದ್ರ ಸರ್ಕಾರ ತಿಳಿಸಿದೆ.
ಇನ್ನು ಈ ಸಂಬಂಧ ಪ್ರಧಾನಿ ಮೋದಿ ಅವರು ಟ್ವೀಟ್ ಮಾಡಿದ್ದು, ಹೊಸ ಡ್ರೋಣ್ ನಿಯಮಗಳು ಭಾರತದಲ್ಲಿ ಮಹತ್ವದ ಕ್ಷಣಕ್ಕೆ ನಾಂದಿ ಹಾಡಿದೆ. ಈ ನಿಯಮಗಳು ನಂಬಿಕೆ ಮತ್ತು ಸ್ವಯಂ ಪ್ರಮಾಣೀಕರಣದ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತದೆ. ಅನುಮೋದನೆ, ಅನುಸರಣೆ, ಅಗತ್ಯತೆಗಳು, ಪ್ರವೇಶ ತಡೆಗಳನ್ನು ಗಮನಾರ್ಹವಾಗಿ ಈ ನಿಯಮಗಳಲ್ಲಿ ಕಡಿಮೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಹಾಗೆಯೇ ಹೊಸ ಡ್ರೋಣ್ ನಿಯಮಗಳು ದೇಶದಲ್ಲಿ ಸ್ಟಾರ್ಟ್ಅಪ್ಗಳು, ಈ ವಲಯದಲ್ಲಿ ಕೆಲಸ ಮಾಡುವ ಯುವಕರಿಗೆ ಸಹಾಯ ಮಾಡಲಿದೆ. ನಾವಿನ್ಯತೆ, ವ್ಯಾಪಾರ ದೃಷ್ಟಿಯಿಂದ ಹೊಸ ಸಾಧ್ಯತೆಗಳನ್ನು ಈ ನಿಯಮಗಳು ತೆರೆಯಲಿವೆ. ಈ ನಿಯಮಗಳು ಆವಿಷ್ಕಾರ, ತಂತ್ರಜ್ಞಾನ, ಎಂಜಿನಿಯರಿಂಗ್ನಲ್ಲಿ ಭಾರತದ ಶಕ್ತಿ ಪ್ರದರ್ಶನಕ್ಕೆ ಸಹಕರಿಸಲಿವೆ ಎಂದು ತಿಳಿಸಿದ್ದಾರೆ.
The new Drone Rules usher in a landmark moment for this sector in India. The rules are based on the premise of trust and self-certification. Approvals, compliance requirements and entry barriers have been significantly reduced. https://t.co/Z3OfOAuJmp
— Narendra Modi (@narendramodi) August 26, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.