ನವದೆಹಲಿ: ತಾಲೀಬಾನ್ ಉಗ್ರರ ಕೈವಶವಾಗಿ ನಲುಗುತ್ತಿರುವ ಅಫ್ಘಾನಿಸ್ಥಾನದಿಂದ ಭಾರತಕ್ಕೆ ಐಎಎಫ್ ವಿಮಾನದ ಮೂಲಕ 24 ಭಾರತೀಯರು ಮತ್ತು 11 ನೇಪಾಳದ ಪ್ರಜೆಗಳು ಪ್ರಯಾಣಿಸಿದ್ದಾರೆ.
ಅಫ್ಘಾನಿಸ್ಥಾನದಲ್ಲಿರುವ ಭಾರತೀಯರು ಮತ್ತು ಇತರ ನಾಗರಿಕರ ರಕ್ಷಣೆಯ ಉದ್ದೇಶದಿಂದ ಕೇಂದ್ರ ಸರ್ಕಾರ ‘ಆಪರೇಷನ್ ದೇವಿಶಕ್ತಿ’ ಹೆಸರಿನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಇದರಡಿಯಲ್ಲಿ ಈಗಾಗಲೇ 800 ಕ್ಕೂ ಅಧಿಕ ಜನರು ಸುರಕ್ಷಿತವಾಗಿ ಕಾಬೂಲ್ನಿಂದ ಭಾರತಕ್ಕೆ ಬಂದಿದ್ದಾರೆ.
ಇದೀಗ ಐಎಎಫ್ ವಿಮಾನದ ಮೂಲಕ 24 ಭಾರತದ ಪ್ರಜೆಗಳು ಮತ್ತು 11 ಮಂದಿ ನೇಪಾಳಿ ಪ್ರಜೆಗಳು ಕಾಬೂಲ್ನಿಂದ ನವದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ. ಈ ಬಗ್ಗೆ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.