ಬೆಂಗಳೂರು: ಗೂಗಲ್ ಮ್ಯಾಪ್ನಲ್ಲಿ ಕರ್ನಾಟಕದ ಹಳ್ಳಿಗಳು ಮತ್ತು ನಗರಗಳ ಹೆಸರುಗಳನ್ನು ತಪ್ಪಾಗಿ ಉಲ್ಲೇಖಿಸಲಾಗಿದ್ದು, ಅವುಗಳನ್ನು ಸರಿಪಡಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಗೂಗಲ್ಗೆ ಪತ್ರ ಬರೆದಿದೆ.
ಕರ್ನಾಟಕ ಸರ್ಕಾರ ಕನ್ನಡ ನಾಡು, ನುಡಿ, ಸಂಸ್ಕೃತಿ, ಪ್ರಚಾರ, ಹಿತರಕ್ಷಣೆ, ಕನ್ನಡವನ್ನು ಸಾರ್ವತ್ರಿಕ ಭಾಷೆಯನ್ನಾಗಿ ಬಳಕೆ ಮಾಡುವುದಕ್ಕೆ ಮೊದಲಿನಿಂದಲೂ ಪ್ರಯತ್ನ ನಡೆಸುತ್ತಾ ಬಂದಿದೆ. ಇದನ್ನು ಮತ್ತಷ್ಟು ವ್ಯವಸ್ಥಿತವಾಗಿ ರೂಪಿಸಲು ಪ್ರಾಧಿಕಾರ ಮತ್ತಷ್ಟು ಚಟುವಟಿಕೆಗಳನ್ನು ನಡೆಸುತ್ತಿದೆ ಎಂದು ಪತ್ರದಲ್ಲಿ ತಿಳಿಸಿದೆ.
ಆದರೆ ಗೂಗಲ್ ಮ್ಯಾಪ್ನಲ್ಲಿ ಕರ್ನಾಟಕದ ಬಹಳಷ್ಟು ಗ್ರಾಮ, ನಗರಗಳ ಹೆಸರನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ. ಪ್ರವಾಸಿಗರು ಹೆಚ್ಚಾಗಿ ಗೂಗಲ್ ಮ್ಯಾಪ್ ಅನ್ನೇ ಬಳಕೆ ಮಾಡಿಕೊಂಡು ಪ್ರಯಾಣ ನಡೆಸುತ್ತಾರೆ. ಈ ನಿಟ್ಟಿನಲ್ಲಿ ಕರ್ನಾಟಕದ ಪ್ರದೇಶಗಳ ಹೆಸರನ್ನು ಕೂಡಲೇ ಸರಿಪಡಿಸಿ, ಬಳಕೆಗೆ ಒದಗಿಸುವಂತೆ ತಿಳಿಸಿದೆ. ಈ ಸಂಬಂಧ ಅಗತ್ಯವಾದಲ್ಲಿ ಗೂಗಲ್ಗೆ ಪ್ರಾಧಿಕಾರವೂ ಸಹಕಾರ ನೀಡಲಿದೆ ಎಂದು ಪತ್ರದಲ್ಲಿ ತಿಳಿಸಿದೆ.
Kannada Development Authority has written letter to @GoogleIndia urging them to correct the names of villages /cities of Karnataka that are wrongly mentioned in @googlemaps @NewIndianXpress @santwana99 @XpressBengaluru pic.twitter.com/82VxB08pqC
— Ashwini M Sripad/ಅಶ್ವಿನಿ ಎಂ ಶ್ರೀಪಾದ್🇮🇳 (@AshwiniMS_TNIE) August 25, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.