ಹೈದರಾಬಾದ್: ಆಂದ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಸೋಮವಾರ ಮುಂಜಾನೆ ರೈಲೊಂದಕ್ಕೆ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಭಾರೀ ಅನಾಹುತ ಸಂಭವಿಸಿದ್ದು, ಐವರು ಮೃತರಾಗಿದ್ದಾರೆ. ಮೃತರಲ್ಲಿ ದೇವದುರ್ಗದ ಕಾಂಗ್ರೆಸ್ ಶಾಸಕ ವೆಂಕಟೇಶ್ ನಾಯಕ್ ಕೂಡ ಸೇರಿದ್ದಾರೆ.
ಬೆಂಗಳೂರು-ನಂದೆದ್ ಎಕ್ಸ್ಪ್ರೆಸ್ ರೈಲಿಗೆ ಗ್ರೆನೈಟ್ ಹೊತ್ತೊಯ್ಯುತ್ತಿದ್ದ ಲಾರಿ ಢಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ. ಇದರಿಂದಾಗಿ ಎಚ್1 ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಐವರು ಪ್ರಯಾಣಿಕರು ಮತ್ತು ಲಾರಿ ಚಾಲಕ ಅಸುನೀಗಿದ್ದಾರೆ.
ಅನಂತಪುರದ ಪೆನುಕೊಂಡ ಮಂಡಲ್ನ ಮದಕಸಿರಾ ಕ್ರಾಸಿಂಗ್ ಬಳಿ ಬೆಳಿಗ್ಗೆ 2.30ರ ಸುಮಾರಿಗೆ ಈ ಅನಾಹುತ ಸಂಭವಿಸಿದೆ. ರೈಲಿನ ಎಸ್1 ಮತ್ತು ಎಸ್2 ಬೋಗಿಗಳು ಹಳಿ ತಪಿ ಕೆಲವರಿಗೆ ಗಾಯಗಳಾಗಿವೆ.
ರಾಯಚೂರಿನ ದೇವದುರ್ಗಾ ಶಾಸಕ ವೆಂಕಟೇಶ್ ನಾಯಕ್ ಅವರು ಕೂಡ ಈ ವೇಳೆ ಇದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದು, ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಘಟನೆ ನಡೆದ ತಕ್ಷಣವೇ 20 ಬಸ್ಗಳನ್ನು ಅಲ್ಲಿಗೆ ಕಳುಹಿಸಿ ರೈಲಿನಲ್ಲಿದ್ದ ಪ್ರಯಾಣಿಕರನ್ನು ಅವರವರ ಊರಿಗೆ ಕರೆದೊಯ್ಯಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.